ಗೆಲುವಿನ ಸನಿಹದಲ್ಲಿ ಎಡವಿದ ಭಾರತ; 2ನೇ ಟಿ20 ಪಂದ್ಯ ಗೆದ್ದ ಲಂಕಾ; ಸರಣಿ ಸಮಬಲ ಪುಣೆಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ. ಪುಣೆ: ಪುಣೆಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ. ಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ 207 ರನ್ ಗಳ ಬೃಹತ್ ಗುರಿ ನೀಡಿತ್ತು. ಭಾರತದ ಆರಂಭಿಕ ಆಟಗಾರರು ಬೇಗ ವಿಕೆಟ್ ಒಪ್ಪಿಸಿದ್ದು ಆರಂಭದಲ್ಲಿ ಭಾರತಕ್ಕೆ ಹಿನ್ನೆಡೆಯಾಗಿತ್ತು. ಇದನ್ನೂ ಓದಿ: ಎರಡನೇ ಟಿ20 ಪಂದ್ಯ: ಲಂಕಾ ಸ್ಫೋಟಕ ಬ್ಯಾಟಿಂಗ್; ಭಾರತಕ್ಕೆ 207 ರನ್ ಗಳ ಬೃಹತ್ ಗುರಿ9 ನೇ ಓವರ್‌ ವೇಳೆಗೆ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿನ ಆಸೆ ಮರೀಚಿಕೆಯಾಗಿತ್ತು. ಆದರೆ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಜೊತೆಯಾಟದ ಪರಿಣಾಮ ಭಾರತದ ಗೆಲುವಿನ ಆಸೆ ಜೀವಂತವಾಗಿತ್ತು. 41 ಎಸೆತಗಳಲ್ಲಿ ಅಕ್ಷರ್ ಪಟೇಲ್ ಹಾಗೂ ಸೂರ್ಯ ಕುಮಾರ್ ಯಾದವ್ ಅವರ 91 ರನ್‌ ಜೊತೆಯಾಟದ ಪರಿಣಾಮ ಭಾರತ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಭಾರತ 8 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲು ಅನುಭವಿಸಿತು.ಇಡೀ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದು ಒಟ್ಟು 26 ಸಿಕ್ಸರ್ ಹಾಗೂ 21 ಬೌಂಡರಿಗಳು ದಾಖಲಾಯಿತು.