ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಭಾರೀ ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ 75 ರನ್ ಗಳಿಗೆ ಆಲೌಟ್ ಆಯಿತು. ನಂತರ ಈ ಗುರಿ ಬೆನ್ನಟ್ಟಿದ್ದ ಕರ್ನಾಟಕ ಕೇವಲ 6.5 ಓವರ್ ಗಳಲ್ಲಿ ಮಯಾಂಕ್ ಅಗರ್ವಾಲ್ 47, ದೇವದತ್ ಪಡಿಕ್ಕಲ್ 28 ರನ್ ಗಳೊಂದಿಗೆ ವಿಜಯದ ನಗೆ ಬೀರಿತು.ಉಳಿದಂತೆ ತಮಿಳುನಾಡು ಮತ್ತು ಆಂಧ್ರ ಪ್ರದೇಶ ನಾಕೌಟ್ ಹಂತ ತಲುಪುವ ಭರವಸೆ ಹೊಂದಿವೆ. ಆದರೆ, ಮಹಾರಾಷ್ಟ್ರ ವಿರುದ್ಧ ಸೋತ ನಂತರ ಕೇರಳ ಭರವಸೆಯನ್ನು ಕಳೆದುಕೊಂಡಿತು. ಆಂಧ್ರ ಪ್ರದೇಶ ಎರಡು ವಿಕೆಟ್ ಗಳೊಂದಿಗೆ ಬಿಹಾರವನ್ನು ಸೋಲಿಸಿತು. ಕರಣ್ ಶಿಂಧೆ 38 ಎಸೆತಗಳಲ್ಲಿ 75 ರನ್ ಗಳಿಸುವ ಮೂಲಕ ಗೆಲುವಿನ ಹಾದಿ ಸುಗಮಗೊಳಿಸಿದರು.ತಮಿಳುನಾಡು ಪರ ವಾಷಿಂಗ್ಟನ್ ಸುಂದರ್ , ವರುಣ್ ಚಕ್ರವರ್ತಿ ತಲಾ ಒಂದು, ಆರ್ ಸಾಯಿ ಕಿಶೋರ್ 3 ಮತ್ತು ಮುರುಗನ್ ಅಶ್ವಿನ್ 2 ವಿಕೆಟ್ ಕಬಳಿಸುವ ಮೂಲಕ ಜಾರ್ಖಂಡ್ ತಂಡವನ್ನು ಸೋಲಿಸಿದರು. ಭಾರತ ತಂಡದ ಕೀಪರ್ ಸಂಜು ಸ್ಯಾಮ್ಸನ್ ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲವಾದ ಕಾರಣ ಕೇರಳ ಮಹಾರಾಷ್ಟ್ರ ವಿರುದ್ಧ 168 ರನ್ ಗಳ ಚೇಸಿಂಗ್‌ನಲ್ಲಿ ಸೋತಿತು.ಮಹಾರಾಷ್ಟ್ರ ಪರ ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಸ್ 114 ರನ್ ಗಳಿಸಿ ಮಿಂಚಿದರು.