ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ: 189 ರನ್ ಗಳಿಗೆ ಜಿಂಬಾಬ್ವೆ ಆಲೌಟ್ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 40.3 ಓವರ್ ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದೆ. ಹರಾರೆ: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 40.3 ಓವರ್ ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡದ ಪರ ರೆಗಿಸ್ ಚಕಬ್ವಾ 35, ಬ್ರಾಡ್ ಇವಾನ್ಸ್ 33, ರಿಚರ್ಡ್ ನಾಗರ್ವ 34, ರಿಯಾನ್ ಬರ್ಲ್ 11, ಸಿಖಂದರ್ ರಾಜ 12 ರನ್ ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಒಂದಂಕಿ ದಾಟಲಿಲ್ಲ. ಇದರಿಂದಾಗಿ 40. 3 ಓವರ್ ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು.ಟೀಂ ಇಂಡಿಯಾ ಪರ ದೀಪಕ್ ಚಹರ್ 3, ಪ್ರಸಿದ್ಧ್ ಕೃಷ್ಣ 3, ಅಕ್ಸರ್ ಪಟೇಲ್ 3 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.# 1st | 189 40.3 ( 35; 3/24) (: ) ../w0AFmKgbLj