ಟಿ20 ಶ್ರೇಯಾಂಕ: ಅಗ್ರಸ್ಥಾನದಲ್ಲಿ ಇಂಗ್ಲೆಂಡ್, ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ನವದೆಹಲಿ: ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.ದಕ್ಷಿಣ ಆಫ್ರಿಕಾ ವಿರುದ್ಧ 3–0 ಕ್ಲೀನ್ ಸ್ವೀಪ್ ಮಾಡುವ ಮೂಲಕ, ಇಂಗ್ಲೆಂಡ್ ಟಿ-20 ಶ್ರೇಯಾಂಕದಲ್ಲಿ ಪ್ರಥಮ ಸ್ಥಾನದಲ್ಲಿದೆ. ಟಿ20 ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಇಂಗ್ಲೆಂಡ್ 271 ಪಾಯಿಂಟ್‌ಗಳನ್ನು ಹೊಂದಿತ್ತು ಮತ್ತು ಸರಣಿಯನ್ನು ಗೆದ್ದ ನಂತರ 275ಕ್ಕೆ ಏರಿದೆ. ! # ../TYgC8ZJczXಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು 266 ಅಂಕ ಗಳಿಸಿರುವ ಭಾರತ ಮೂರನೇ ಸ್ಥಾನ, ಪಾಕಿಸ್ತಾನ ನಾಲ್ಕನೇ, ದಕ್ಷಿಣ ಆಫ್ರಿಕಾ ಐದನೇ ಮತ್ತು ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ.