ನೈಟ್‌ಕ್ಲಬ್‌ ಹೊರಗೆ ಯುವತಿಯನ್ನು ತಳ್ಳುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ, ವಿಡಿಯೋ ವೈರಲ್! ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರು ಮುಂಬೈನ ನೈಟ್‌ಕ್ಲಬ್‌ನ ಹೊರಗೆ ಯುವತಿಯನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರು ಮುಂಬೈನ ನೈಟ್‌ಕ್ಲಬ್‌ನ ಹೊರಗೆ ಯುವತಿಯನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ಪೃಥ್ವಿ ಶಾ ಅವರು ಸೆಲ್ಫಿ ನೀಡಲು ನಿರಾಕರಿಸಿದ ನಂತರ ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರೊಂದಿಗೆ ತಳ್ಳಾಟ ನಡೆಸಿದ್ದಾರೆ. ಪೃಥ್ವಿ ಶಾ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದೀಗ, ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗಿನ ಜಗಳದಲ್ಲಿ ತೊಡಗಿರುವ ಕಾರಣದಿಂದ ಸುಲಿಗೆ ಮತ್ತು ಕಾನೂನುಬಾಹಿರ ನಡೆ ಆರೋಪದ ಮೇಲೆ ಹಲವಾರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಲ್ಫಿಗೆ ನಿರಾಕರಣೆ, ಕ್ರಿಕೆಟ್ ಆಟಗಾರ ಪೃಥ್ವಿ ಶಾ ಸ್ನೇಹಿತನ ಕಾರಿನ ಮೇಲೆ ದಾಳಿವರದಿಗಳ ಪ್ರಕಾರ, ಪೃಥ್ವಿ ಶಾ ತನ್ನ ಸ್ನೇಹಿತನ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಾಗ ಎಂಟು ಮಂದಿಗೆ ಸೆಲ್ಫಿಗೆ ನಿರಾಕರಿಸಿದ ನಂತರ ಜಗಳ ನಡೆದಿದೆ. ಅವರು ಸೆಲ್ಫಿಗೆ ನಿರಾಕರಿಸಿದ್ದರಿಂದ ವ್ಯಕ್ತಿಗಳು ಭಾರತೀಯ ಆಟಗಾರನ ಮೇಲೆ ಹಲ್ಲೆ ನಡೆಸಿದ್ದು ಶಾ ಸ್ನೇಹಿತನ ಕಾರಿಗೆ ಕಲ್ಲು ತೂರಿದರು.ವಿಡಿಯೋದಲ್ಲಿ ಪೃಥ್ವಿ ಶಾ ಹುಡುಗಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು. ಇದಲ್ಲದೆ, ಹುಡುಗಿ ಶಾಗೆ ಕೈ ತೋರಿಸುತ್ತಿರುವುದು ಕಾಣಬಹುದು. # # & # # #, . @ @ @ @ @ ../6LIpiWGkKg