ತಾಲಿಬಾನ್ ಅಳ್ವಿಕೆಯ ನಡುವೆಯೇ ಬಾಂಗ್ಲಾದೇಶ ತಲುಪಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ತಾಲಿಬಾನ್ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ನಂತರ ವಿದೇಶದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಮೆಂಟ್ ಇದು ಎನ್ನುವುದು ವಿಶೇಷ. ಧಾಕಾ: ಅಫ್ಘಾನಿಸ್ತಾನದ ಅಂಡರ್ 19 ಕ್ರಿಕೆಟ್ ತಂಡ ಬಾಂಗ್ಲಾದೇಶದ ರಾಜಧಾನಿ ಧಾಕಾಗೆ ಆಗಮಿಸಿದೆ. ತಾಲಿಬಾನ್ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ನಂತರ ವಿದೇಶದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಮೆಂಟ್ ಇದು ಎನ್ನುವುದು ವಿಶೇಷ. ಆಫ್ಘನ್ ಕ್ರಿಕೆಟ್ ತಂಡ 5 ಏಕದಿನ ಪಂದ್ಯಗಳು ಮತ್ತು ಟೆಸ್ಟ್ ಪಂದ್ಯವನ್ನಾಡಲಿದೆ. ಸೆಪ್ಟೆಂಬರ್ 10- 15 ರ ತನಕ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ. ಕೆಂಪು ಸಮವಸ್ತ್ರ ಧರಿಸಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಆಫ್ಘನ್ ಕ್ರಿಕೆಟ್ ಆಟಗಾರರ ವಿಡಿಯೋವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಬಂಡುಕೋರ ಸಂಘಟನೆಯಿಂದ ಅಧಿಕಾರದ ಗದ್ದುಗೆಗೇರಿದ ತಾಲಿಬಾನ್: ಸರ್ಕಾರ ರಚನೆಗೆ ಮುಹೂರ್ತ ಸನ್ನಿಹಿತತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲಿ ಆಫ್ಘನ್ ಸರ್ಕಾರ ರಚನೆಅಫ್ಘಾನಿಸ್ತಾನ: ಪಂಜಶೀರ್ ನಿಯಂತ್ರಣದಲ್ಲಿದೆ ಎಂದ ತಾಲಿಬಾನ್, ಪ್ರತಿರೋಧ ಪಡೆಯಿಂದ ನಿರಾಕರಣೆ'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ': ಆಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್ ಯೂ ಟರ್ನ್!