2023: ವಿಶ್ವಕಪ್, ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದೆ. ಕೋಲ್ಕತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದೆ.ಹೌದು.. ನಿನ್ನೆ ಭಾರತ ನೀಡಿದ್ದ 327 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗುವ ಮೂಲಕ 243 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಏಕದಿನ ಕ್ರಿಕೆಟ್ ಮತ್ತು ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಸಿಕ್ಕ ಅತೀ ದೊಡ್ಡ ಸೋಲಾಗಿದೆ.ಇದನ್ನೂ ಓದಿ: 2023: ಹುಟ್ಟುಹಬ್ಬದಂದೆ 49ನೇ ಶತಕ ಸಿಡಿಸಿ, ಸಚಿನ್ ರ ಅತ್ಯಧಿಕ ಶತಕಗಳ ದಾಖಲೆ ಸರಿಗಟ್ಟಿದ ಕೊಹ್ಲಿಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದ್ದು, ಈ ಹಿಂದೆ 2002ರಲ್ಲಿ ಪೋರ್ಟ್ ಆಫ್ ಎಲಿಜೆಬೆತ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 182 ರನ್ ಗಳ ಅಂತರದಲ್ಲಿ ಸೋಲುಂಡಿತ್ತು. ಇದು ರನ್ ಗಳ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸಿಕ್ಕ ಅತೀ ದೊಡ್ಡ ಸೋಲಾಗಿತ್ತು. ಆದರೆ ನಿನ್ನೆ ಭಾರತ 243 ರನ್ ಗಳ ಅಂತರದಲ್ಲಿ ಸೋಲಿಸಿದ್ದು, ಇದೀಗ ಇದು ದಕ್ಷಿಣ ಆಫ್ರಿಕಾದ ಅತೀ ದೊಡ್ಡ ಸೋಲಾಗಿದೆ. ಅಚ್ಚರಿ ಎಂದರೆ ಈ ಹಿಂದಿನ ಅಂದರೆ 2015ರಲ್ಲೂ ಮೆಲ್ಬರ್ನ್ ನಲ್ಲಿ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ತಂಡ 130 ರನ್ ಗಳ ಹೀನಾಯ ಸೋಲು ಅನುಭವಿಸಿತ್ತು. ( ) 243 2023 182 2002 180 2013 178 2018Their 130 2015.ಇದನ್ನೂ ಓದಿ: 2023: ಕೇಕ್ ಇಲ್ಲ, ಮಾಸ್ಕ್ ಇಲ್ಲ; ಈಡನ್ ಗಾರ್ಡನ್ಸ್ನಲ್ಲಿ ಕೊಹ್ಲಿ ಬರ್ತ್ ಡೇ ಸೆಲೆಬ್ರೇಷನ್ ದಿಢೀರ್ ರದ್ದುಏಕದಿನದಲ್ಲಿ 2ನೇ ಕನಿಷ್ಠ ಮೊತ್ತ ಇನ್ನು ನಿನ್ನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗಿದ್ದು, ಇದು ದಕ್ಷಿಣ ಆಫ್ರಿಕಾ ತಂಡದ ಏಕದಿನ ಕ್ರಿಕೆಟ್ ನ 2ನೇ ಕನಿಷ್ಟ ಮೊತ್ತವಾಗಿದೆ. ಈ ಹಿಂದೆ 1993ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 69ರನ್ ಗಳಿಗೆ ಆಲೌಟ್ ಆಗಿತ್ತು. ಇದು ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ಗಳಿಸಿದ ಕಡಿಮೆ ಮೊತ್ತವಾಗಿದೆ. ಬಳಿಕ 2008ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ನಲ್ಲಿ (83 ರನ್), 2022ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ನಲ್ಲಿ (83ರನ್) ಇದೇ 83 ರನ್ ಗೆ ಆಲೌಟ್ ಆಗಿತ್ತು. ಇದೀಗ ಮತ್ತೆ ಭಾರತ ತಂಡದ ವಿರುದ್ದ ಕೋಲ್ಕತಾದ ಈಡನ್ ಗಾರ್ಡೆನ್ ಕ್ರೀಡಾಂಗಣದಲ್ಲಿ 83ರನ್ ಗೇ ಆಲೌಟ್ ಆಗಿದೆ. 69 1993 83 2008 83 2022 83 2023 99 2022Their 149 2007.ಇದನ್ನೂ ಓದಿ: 2023: ಭಾರತದ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ, 83 ರನ್ ಗಳಿಗೆ ಹರಿಣಿಗಳು ಆಲೌಟ್ವಿಶ್ವಕಪ್ ನಲ್ಲಿ ರನ್ ಲೆಕ್ಕಾಟಾರದಲ್ಲಿ 3ನೇ ಅತಿ ದೊಡ್ಡ ಸೋಲು ಭಾರತ ನೀಡಿದ್ದ 327 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗುವ ಮೂಲಕ 243 ರನ್ ಗಳ ಅಂತರದಲ್ಲಿ ಸೋಲು ಕಂಡಿದ್ದು, ಇದು ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ 3ನೇ ಅತೀ ದೊಡ್ಡ ಸೋಲಾಗಿದೆ. ಈ ಹಿಂದೆ ಅಂದರೆ ಹಾಲಿ ವಿಶ್ವಕಪ್ ಟೂರ್ನಿಯಲ್ಲೇ ಈ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇದೇ ಭಾರತ ತಂಡ 302ರನ್ ಗಳ ಅಂತರದಲ್ಲಿ ಸೋಲಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿನ ತಂಡವೊಂದರ (ರನ್ ಗಳ ಲೆಕ್ಕಾಚಾರದಲ್ಲಿ) ಅತೀ ದೊಡ್ಡ ಸೋಲಾಗಿದೆ. ಅಚ್ಚರಿ ಎಂದರೆ ಹಾಲಿ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಒಂದೂ ಸಿಕ್ಸರ್ ಸಿಡಿಸದ ಮೊದಲ ಪಂದ್ಯ ಇದಾಗಿದೆ. 302 2023 257 2015 243 2023 229 2023 215 ' 2007 2023