: ಔಟಾದ ಆಕ್ರೋಶದಲ್ಲಿ ಹೆಲ್ಮೆಟ್ ಅನ್ನೇ ಬೌಂಡರಿಗೆ ಬಾರಿಸಿದ ಅಂತಿಮ ಓವರ್ನಲ್ಲಿ ಸತತ 4 ಸಿಕ್ಸರ್ ಬಾರಿಸಿ ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್( ), ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗಯಾನ: ಕೆರಿಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಿಂಡೀಸ್ ಸ್ಫೋಟಕ ಬ್ಯಾಟರ್ ಕಾರ್ಲೊಸ್ ಬ್ರಾಥ್ ವೇಟ್ ಔಟಾದ ಆಕ್ರೋಶಕ್ಕೆ ತನ್ನ ಹೆಲ್ಮೆಟ್ ಅನ್ನೇ ಬೌಂಡರಿಗೆ ಬಾರಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.ಹೌದು.. ಈ ಹಿಂದೆ 2016ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಅಂತಿಮ ಓವರ್ನಲ್ಲಿ ಸತತ 4 ಸಿಕ್ಸರ್ ಬಾರಿಸಿ ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್( ), ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾಳ್ಮೆ ಕಳೆದುಕೊಂಡು ತನ್ನ ಹೆಲ್ಮೆಟ್ ಅನ್ನು ಬ್ಯಾಟ್ನಿಂದ ಹೊಡೆದು ಸಿಕ್ಸರ್ಗಟ್ಟಿದ್ದಾರೆ. ಈ ವಿಡಿಯೊ ವೈರಲ್( ) ಆಗಿದೆ. ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡದ ಜೋಶ್ ಲಿಟಲ್ ಎಸೆತದ ಬ್ರಾಥ್ ವೇಟ್ ಅವರ ಭುಜಕ್ಕೆ ತಾಗಿ ವಿಕೆಟ್ ಕೀಪರ್ ಕೈ ಸೇರಿತು. ಚೆಂಡಿಗೆ ಬ್ಯಾಟ್ ತಾಗಿರಬಹುದು ಎಂದು ಕೀಪರ್ ಔಟ್ಗಾಗಿ ಮನವಿ ಮಾಡಿದರು.ಫೀಲ್ಡ್ ಅಂಪೈರ್ ಔಟೆಂದು ತೀರ್ಪು ನೀಡಿದರು. ಅಂಪೈರ್ ಅವರ ತಪ್ಪು ನಿರ್ಣಯದಿಂದ ತಾಳ್ಮೆ ಕಳೆದುಕೊಂಡ ಬ್ರಾಥ್‌ವೈಟ್, ಡಗೌಟ್ ಕಡೆಗೆ ಹೋಗುವಾಗ ಸಿಟ್ಟಿನಿಂದ ಹೆಲ್ಮೆಟ್‌ ಮೇಲಕ್ಕೆ ಎಸೆದು ಬ್ಯಾಟ್ನಿಂದ ಜೋರಾಗಿ ಜೋರಾಗಿ ಹೊಡೆದರು. ಹೊಡೆದ ರಭಸಕ್ಕೆ ಹೆಲ್ಮೆಟ್‌ ಪುಡಿ ಪುಡಿಯಾಗಿ ಸಿಕ್ಸರ್ ಲೈನ್ನಿಂದ ಹೊರಕ್ಕೆ ಸಿಡಿಯಿತು. ಬಳಿಕ ಬ್ಯಾಟ್ ಕೂಡ ಎಸೆದು ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿದರು. (@)ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರ್ಲೊಸ್ ಬ್ರಾಥ್ ವೇಟ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.