"ವಿರಾಟ್ಗೆ ಯಾವಾಗ ಹೇಗೆ ಆಟ ಆಡಬೇಕು ತಿಳಿದಿದೆ": ಕೊಹ್ಲಿ ಬಗ್ಗೆ ದ್ರಾವಿಡ್ ಮೆಚ್ಚುಗೆ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ರೀಡೆಯನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದು, ಆ ಮೂಲಕ ಯಾವಾಗ ನಿಯಂತ್ರಣ ಮಾಡಬೇಕು, ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು ಎಂಬುದನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಕ್ರೀಡೆಯನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದು, ಆ ಮೂಲಕ ಯಾವಾಗ ನಿಯಂತ್ರಣ ಮಾಡಬೇಕು, ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು ಎಂಬುದನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.ಕೊಹ್ಲಿ ಸಮಯೋಚಿತ ಆಟವನ್ನು ಮೆಚ್ಚಿ ತಲೆದೂಗಿರುವ ದ್ರಾವಿಡ್, ಕೊಹ್ಲಿಗೆ ಆಟವನ್ನು ಯಾವಾಗ ನಿಯಂತ್ರಿಸಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಇದನ್ನೇ ಅವರು ಮತ್ತಷ್ಟು ಹೆಚ್ಚಿಸಿಕೊಂಡರೆ ಅದು ಸಕಾರಾತ್ಮಕ ಲಕ್ಷಣವಾಗಲಿದ್ದು, ಆಟವನ್ನು ಮತ್ತಷ್ಟು ಅದ್ಭುತಗೊಳಿಸುತ್ತದೆ ಎಂದು ಹೇಳಿದ್ದಾರೆ.50 ಓವರ್ ಕ್ರಿಕೆಟ್ ನಲ್ಲಿ ವಿರಾಟ್ ಗೆ ಅಚ್ಚರಿ ಮೂಡಿಸುವಂತಹ ಟೆಂಪ್ಲೆಟ್ ಇದೆ. ಈ ಬಗ್ಗೆ ಅವರ ದಾಖಲೆಗಳೇ ಮಾತನಾಡುತ್ತವೆ. ಕೊಹ್ಲಿ ಲಯ ಕಂಡುಕೊಂಡಿದ್ದಾರೋ ಇಲ್ಲವೋ ಆದರೆ ಅವರ ತರಬೇತಿಯ ತೀವ್ರತೆಯು ಎಂದಿಗೂ ಕಡಿಮೆಯಾಗುವುದಿಲ್ಲ, ತಂಡದಲ್ಲಿರುವ ಕಿರಿಯರು ಎಲ್ಲರೂ ಅವರನ್ನು ನೋಡಿ ಕಲಿಯಬೇಕಾದ ಅಂಶ ಇದು ಎಂದು ದ್ರಾವಿಡ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹತ್ತಿರವಾಗುತ್ತಿದ್ದು, ತಂಡಗಳು ಹೆಚ್ಚು ಆಕ್ರಮಣಕಾರಿಯಾಗಿವೆ, ಅದರ ಪರಿಣಾಮವಾಗಿ ಫಲಿತಾಂಶಗಳೂ ಬರುತ್ತಿವೆ. ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ವಿಯಾಗಲು, ತಂಡಗಳು ಪ್ರತಿ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗಬೇಕು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.