T20 2024: ಕಳಪೆ ಬ್ಯಾಟಿಂಗ್, ಭರ್ಜರಿ ಬೌಲಿಂಗ್; ಉಗಾಂಡ ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಈ ಪಂದ್ಯದಲ್ಲಿ ಉಗಾಂಡ ತಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ. ಗಯಾನಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ ವಿಂಡೀಸ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಈ ಪಂದ್ಯದಲ್ಲಿ ಉಗಾಂಡ ತಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ.ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ನೀಡಿದ 174ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಉಗಾಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕೆಳ ಕ್ರಮಾಂಕದ ಜುಮಾ ಮಿಯಾಗಿ (ಅಜೇಯ 13) ಅವರನ್ನು ಹೊರತುಪಡಿಸಿ ತಂಡದ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಿಲ್ಲ.12 ಓವರ್ ನಲ್ಲೇ ಉಗಾಂಡ 39 ರನ್ ಗಳಿಗೇ ಆಲೌಟ್ ಆಯಿತು. ವಿಂಡೀಸ್ ಪರ ಅಕೀಲ್ ಹೊಸೇನ್ 5 ವಿಕೆಟ್ ಪಡೆದು ಉಗಾಂಡ ಪತನಕ್ಕೆ ಕಾರಣರಾದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 134 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.ಹಲವು ದಾಖಲೆಗಳ ನಿರ್ಮಾಣಇನ್ನು ಈ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದ್ದು, ಪ್ರಮುಖವಾಗಿ ಕೇವಲ 39ರನ್ ಗಳಿಗೆ ಉಗಾಂಡ ಆಲೌಟ್ ಆಗಿದೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2014ರಲ್ಲಿ ನೆದರ್ಲ್ಯಾಂಡ್ಸ್ ತಂಡವು 39 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ ಉಗಾಂಡ ಈ ಕಳಪೆ ದಾಖಲೆಯನ್ನು ಸರಿಗಟ್ಟಿದೆ. - T20 WCs39 - , , 201439 - , , 2024*44 - , , 202155 - , , 202158 - , , 2024West 39 12 173 . 11 .#T20WorldCup #t20USA # #T20CWC #T20WC2024 # # ../wJI8Npi9SZವಿಂಡೀಸ್ ಪರ ಉತ್ತಮ ಬೌಲಿಂಗ್ಇನ್ನು ಈ ಪಂದ್ಯದಲ್ಲಿ ವೆಸ್ಟ್ ತಂಡದ ಅಕೀಲ್ ಹೊಸೇನ್ 5 ವಿಕೆಟ್ ಪಡೆದು ಉಗಾಂಡ ಪತನಕ್ಕೆ ಕಾರಣರಾದರು. ಒಟ್ಟು 4 ಓವರ್ ಎಸೆದ ಅಕೀಲ್ 2.80 ಸರಾಸರಿಯಲ್ಲಿ 11 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದರು. ಅಕೀಲ್ ರ ಈ ಪ್ರದರ್ಶನ ವೆಸ್ಟ್ ಇಂಡೀಸ್ ಪರ ದಾಖಲಾದ 2ನೇ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಹಿಂದೆ 2022ರಲ್ಲಿ ಭಾರತ ತಂಡದ ವಿರುದ್ಧ ಒಬೆಡ್ ಮೆಕಾಯ್ ಕೇವಲ 17ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. T20Is6/17 - , , 20225/11 - , , 2024 ()5/15 - , , 20185/26 - , , 2010ವಿಶ್ವಕಪ್ ನಲ್ಲಿ 2ನೇ ಅತೀ ದೊಡ್ಡ ಜಯಇನ್ನು ರನ್ ಗಳ ಲೆಕ್ಕಾಚಾರದಲ್ಲಿ ಉಂಗಾಡ ವಿರುದ್ಧ ವಿಂಡೀಸ್ ದಾಖಲಿಸಿದ 134 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಟಿ20 ವಿಶ್ವಕಪ್ ನಲ್ಲಿ ಅತೀ ದೊಡ್ಡ ರನ್ ಗಳ ಅಂತರದಲ್ಲಿ ಸಿಕ್ಕ 2ನೇ ದಾಖಲೆಯ ಜಯ ಇದಾಗಿದೆ. ಈ ಹಿಂದೆ 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ತಂಡ 172ರನ್ ಗಳ ಅಂತರದ ಜಯ ದಾಖಲಿಸಿತ್ತು. ಇದು ಅಗ್ರಸ್ಥಾನದಲ್ಲಿದೆ. T20 ( )172 - , ', 2007134 - , , 2024*130 - , , 2021130 - , , 2009125 - , , 2024Career- 🌟 @ .#T20WorldCup ../Y3Op4yg7Iyಸತತ ಟಿ20 ಜಯಈ ಟೂರ್ನಿಯಲ್ಲಿ ಉಗಾಂಡ ವಿರುದ್ಧ ಜಯ ದಾಖಲಿಸುವ ಮೂಲಕ ವಿಂಡೀಸ್ ತಂಡ 2024ರಲ್ಲಿ ಸತತ 6ನೇ ಟಿ20 ಪಂದ್ಯದಲ್ಲಿ ಜಯ ದಾಖಲಿಸಿದೆ. ಈ ಹಿಂದೆ 2012-13ರಲ್ಲಿ ವಿಂಡೀಸ್ ತಂಡ ಸತತ 7 ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. T20Is7 2012-136 2024*5 2017