ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಅಕ್ಸರ್ ಪಟೇಲ್ ಬದಲು ತಂಡದಲ್ಲಿ ದೀಪಕ್ ಹೂಡಾ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಪರ್ತ್: ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಬೌನ್ಸ್ ಪಿಚ್ ಇದಾಗಿದ್ದು ಭಾರತದ ಅಗ್ರಶ್ರೇಣಿಯ ಬ್ಯಾಟ್ಸ್ ಮನ್ ಗಳು ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಎದುರಿಸುವ ಬಗ್ಗೆ ಕುತೂಹಲ ಹೆಚ್ಚು ಮೂಡಿದೆ.ಇದನ್ನೂ ಓದಿ: 2030 ರ ವೇಳೆಗೆ ಕ್ರಿಕೆಟ್ ಅನ್ನು ಮುಖ್ಯವಾಹಿನಿ ಕ್ರೀಡೆಯನ್ನಾಗಿ ಮಾಡುವ ಗುರಿ: ಕ್ರಿಕೆಟ್ ಐರ್ಲೆಂಡ್ಈ ಪಂದ್ಯ ಗ್ರೂಪ್ 2 ಟಾಪರ್ ಹಾಗೂ ಭಾರತದ ಸೆಮಿಫೈನಲ್ ನ ದಿಕ್ಕನ್ನು ನಿರ್ಧರಿಸಲಿದೆ. ಇನ್ನು ಉಭಯ ತಂಡಗಳಲ್ಲಿ ಕೆಲವು ಬದಲಾವಣೆಗಳಾಗಿದ್ದು, ಎರಡೂ ತಂಡಗಳು ತಲಾ ಒಬ್ಬ ನುರಿತ ಸ್ಪಿನ್ನರ್ ನ್ನು ಕೈಬಿಟ್ಟಿವೆ. ಭಾರತ ಅಕ್ಸರ್ ಪಟೇಲ್ ಬದಲು ಹೆಚ್ಚುವರಿ ಬ್ಯಾಟ್ಸ್ ಮನ್ ದೀಪಕ್ ಹೂಡಾ ನ್ನು ತಂಡಕ್ಕೆ ಸೇರಿಸಿಕೊಂಡಿದ್ದರೆ, ದಕ್ಷಿಣ ಆಫ್ರಿಕಾ ಪೇಸರ್ ಎನ್‌ಗಿಡಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.