ನಮಗೆ ಸ್ಮೃತಿ ಮಂದಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ: ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಗರಂ 15 ವರ್ಷಗಳಿಂದ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬರುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ವನಿತೆಯರ ತಂಡ ಚೊಚ್ಚಲ ಕಪ್ ಗೆದ್ದು ಎಲ್ಲರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ. 15 ವರ್ಷಗಳಿಂದ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬರುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ವನಿತೆಯರ ತಂಡ ಚೊಚ್ಚಲ ಕಪ್ ಗೆದ್ದು ಎಲ್ಲರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ.ಆದರೆ ಈ ಮಧ್ಯೆ ಆರ್ ಸಿಬಿ ಫ್ರಾಂಚೈಸಿಯ ಒಂದು ನಡೆ ಇದೀಗ ಅಭಿಮಾನಿಗಳು ಕೆರಳುವಂತೆ ಮಾಡಿದೆ. ಹೌದು ಅದಕ್ಕೆ ಕಾರಣವಾಗಿರುವುದು ನಟಿ ರಶ್ಮಿಕಾ ಮಂದಣ್ಣ. ತುಂಬಾ ವರ್ಷಗಳಿಂದ ಅಭಿಮಾನಿಗಳು ಆರ್ ಸಿಬಿ ಹೆಸರನ್ನು ಬದಲಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. ಅದಕ್ಕೆ ಪ್ರತಿಯಾಗಿ ಫ್ರಾಂಚೈಸಿ ಸಹ ಇದೀಗ ಇಂಗ್ಲಿಷ್ ನಲ್ಲಿ ( ) ಬದಲಿಗೆ ( ) ಮಾಡಲು ಉದ್ದೇಶಿಸಿದೆ.ಅದರಂತೆ ಐಪಿಎಲ್ ಆರಂಭಕ್ಕೂ ಮುನ್ನ ಅನೇಕ ಸೆಲೆಬ್ರಿಟಿಗಳ ಜೊತೆ ಆರ್ಸಿಬಿ ಸಹಯೋಗ ಮಾಡಿಕೊಂಡಿದೆ. ರಶ್ಮಿಕಾ ಮಂದಣ್ಣ ಜೊತೆ ಮ್ಯಾನೇಜ್ಮೆಂಟ್ ಕೈ ಜೋಡಿಸಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಇದು ಆರ್ಸಿಬಿ ತೆಗೆದುಕೊಂಡ ಅತಿ ಕೆಟ್ಟ ನಿರ್ಧಾರ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. (@)ಆರ್ಸಿಬಿ ಅನ್ಬಾಕ್ಸ್ ವಿಡಿಯೋದಲ್ಲಿ ಈಗಾಗಲೇ ನಟರಾದ ಶಿವರಾಜ್ಕುಮಾರ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಮುಂತಾದ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಈ ಎಲ್ಲಾ ನಟರು ಹೆಸರು ಬದಲಾವಣೆಯ ಕುರಿತು ಹಿಂಟ್ ನೀಡುತ್ತಿದ್ದಾರೆ. ಅಂತೆ ರಶ್ಮಿಕಾ ಮಂದಣ್ಣ ಸಹ ಅನ್ಬಾಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಕರ್ನಾಟಕಕ್ಕೆ ಸ್ಮೃತಿ ಮಂಧಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಷ್ಟು ಒಳ್ಳೆಯ ಮನುಷ್ಯರ ಮಧ್ಯೆ ಈ ಕಹಿ ಯಾಕೆ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.