ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಟೀಂ ಇಂಡಿಯಾಗೆ ಶೇ.20 ದಂಡ ವಿಧಿಸಿದ ಐಸಿಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಕೊನೇಯ ಟಿ20ಐ ಪಂದ್ಯದ ವೇಳೆ ನಿಧಾನಗತಿ ಬೌಲಿಂಗ್ ಗಾಗಿ ಐಸಿಸಿ ಕೊಹ್ಲಿ ಪಡೆಗೆ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಿದೆ. ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಕೊನೇಯ ಟಿ20ಐ ಪಂದ್ಯದ ವೇಳೆ ನಿಧಾನಗತಿ ಬೌಲಿಂಗ್ ಗಾಗಿ ಐಸಿಸಿ ಕೊಹ್ಲಿ ಪಡೆಗೆ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಿದೆ.ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಂಗಳವಾರ ಈ ಪಂದ್ಯ ನಡೆದಿತ್ತು. ಭಾರತ-ಆಸ್ಟ್ರೇಲಿಯಾ ಮೂರನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತ್ತು. ಆದರೆ ಸರಣಿ 2-1ರಿಂದ ಭಾರತದ ವಶಪಡಿಸಿಕೊಂಡಿದೆ.ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಕೊಹ್ಲಿ ತಂಡಕ್ಕೆ ದಂಡ ಬೀಳುತ್ತಿರುವುದು ಇದು ಎರಡನೇ ಸಾರಿ. ಏಕದಿನ ಸರಣಿಯಲ್ಲೂ ಸ್ಲೋ ಓವರ್‌ ರೇಟ್‌ಗಾಗಿ ದಂಡ ವಿಧಿಸಲಾಗಿತ್ತು. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಫೀಲ್ಡಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್ ಮುಗಿಸಿರಬೇಕು. ಏಕದಿನ ಕ್ರಿಕೆಟ್‌ನಲ್ಲಾದರೆ 3.5 ಗಂಟೆಗಳಲ್ಲಿ 50 ಓವರ್‌ ಮುಗಿಸಿರಬೇಕು. ಗಂಟೆಗೆ ಕನಿಷ್ಠ 14.28 ಓವರ್‌ ಮುಗಿಸಬೇಕಿರುತ್ತದೆ. ಇನ್ನು ಟಿ20ಯಲ್ಲೂ ಗಂಟೆಗೆ 14.28 ಓವರ್‌ನಂತೆ ಡ್ರಿಂಕ್ಸ್ ಬ್ರೇಕ್ ಸೇರಿ ಒಟ್ಟು 75 ನಿಮಿಷಗಳಲ್ಲಿ ಓವರ್‌ ಮುಗಿಸಲು ನಿಯಮವಿರುತ್ತದೆ.ಡಿಸೆಂಬರ್ 17ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಡಿಸೆಂಬರ್ 11ರಂದು ಮೂರು ದಿನಗಳ 2ನೇ ಅಭ್ಯಾಸ ಪಂದ್ಯ ಆರಂಭವಾಗಲಿದೆ. ಡಿಸೆಂಬರ್ 8ರಿಂದ ಆರಂಭವಾಗಿದ್ದ ಮೊದಲ ಅಭ್ಯಾಸ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.