ಪ್ರಸಕ್ತ ಐಪಿಎಲ್ ಅತ್ಯಧಿಕ ಟಿವಿ ರೇಟಿಂಗ್ ಪಡೆಯುವ ನಿರೀಕ್ಷೆಯಿದೆ: ಸೌರವ್ ಗಂಗೂಲಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟಿ20 ಉತ್ಸವ ಈ ಹಿಂದಿನ ಎಲ್ಲ ವೀಕ್ಷಕರ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟಿ20 ಉತ್ಸವ ಈ ಹಿಂದಿನ ಎಲ್ಲ ವೀಕ್ಷಕರ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ, ಅಬು ಧಾಬಿ ಮತ್ತು ಶಾರ್ಜಾ ಕ್ರೀಡಾಂಗಣಗಳ ಜೈವಿಕಾ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಏತನ್ಮಧ್ಯೆ, ಕಳೆದ ವಾರ ಇಬ್ಬರು ಆಟಗಾರರು ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಸದಸ್ಯರಿಗೆ ಕೋವಿಡ್ ದೃಢಪಟ್ಟಿರುವುದು ಟೂರ್ನಿಗೆ ಅಲ್ಪ ಹಿನ್ನಡೆಯಾಗಿದೆ.ಐಪಿಎಲ್ ಟೂರ್ನಿಯನ್ನು ವೀಕ್ಷಿಸಲು ಮೈದಾನಕ್ಕೆ ಬರುತ್ತಿದ್ದ ಅಭಿಮಾನಿಗಳೂ ಸಹ ಈ ಬಾರಿ ಮನೆಯಲ್ಲೇ ಕುಳಿತು ಟಿವಿ ಅಥವಾ ಸಾಮಾಜಿಕ ಮಾಧ್ಯಮ ಮೂಲಕ ವೀಕ್ಷಣೆ ಮಾಡುವುದರಿಂದ ಈ ಬಾರಿ ಟಿವಿ ರೇಟಿಂಗ್ ಜಾಸ್ತಿ ಬರಲಿದೆ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. -19 ಸಾಂಕ್ರಾಮಿಕದ ಮಧ್ಯೆ ಸಾಮಾನ್ಯತೆಯ ಪ್ರಜ್ಞೆಯನ್ನು ಖಚಿತಪಡಿಸಿಕೊಳ್ಳಲು ಐಪಿಎಲ್ ಅನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ. ಕೊರೋನಾ ದೈನಂದಿನ ಜೀವನದ ಪ್ರತಿಯೊಂದು ಅಂಶಗಳಲ್ಲೂ ಅಡ್ಡಿ ಉಂಟುಮಾಡಿದೆ ಎಂದರು.ಖಾಲಿ ಸ್ಟ್ಯಾಂಡ್‌ಗಳ ಮುಂದೆ ಆಡುವ ಬಗ್ಗೆ ಕ್ರಿಕೆಟಿಗರು ಹೇಗೆ ಭಾವಿಸುತ್ತಾರೆ ಎಂದು ಕೇಳಿದಾಗ, ಗಂಗೂಲಿ, ಕೋವಿಡ್ ಮತ್ತು ಸೋಂಕಿನಿಂದಾಗಿ, ಜನರು ಪರಸ್ಪರ ಹತ್ತಿರವಾಗಬೇಕೆಂದು ನಾವು ಬಯಸುವುದಿಲ್ಲ, ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 30ರಷ್ಟು ಪ್ರೇಕ್ಷಕರನ್ನು ನೋಡಬಹುದು ಎಂದು ಹೇಳಿದ್ದಾರೆ.