ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023: ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ವಿಶ್ವದಾಖಲೆ ಜೊತೆಯಾಟ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕರು ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕರು ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ.ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 368ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ಪಾಕಿಸ್ತಾನ ತಂಡಕ್ಕೆ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಭರ್ಜರಿ ಆರಂಭ ಒದಗಿಸಿದರು. ಅಬ್ದುಲ್ಲಾ ಶಫೀಕ್ 61 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 64 ರನ್ ಸಿಡಿಸಿದರೆ, ಇಮಾಮ್ ಉಲ್ ಹಕ್ 71 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 70 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 134 ರನ್ ಗಳ ಜೊತೆಯಾಟವಾಡಿತು. ಆ ಮೂಲಕ ಪಾಕಿಸ್ತಾನದ ಪರ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ನಿರ್ಮಿಸಿದರು.ಇದನ್ನೂ ಓದಿ: ಐಸಿಸಿ ವಿಶ್ವಕಪ್ 2023: ವಾರ್ನರ್, ಮಾರ್ಷ್ ಸ್ಫೋಟಕ ಶತಕ: ಪಾಕಿಸ್ತಾನಕ್ಕೆ 368 ರನ್ ಗುರಿ ನೀಡಿದ ಆಸ್ಟ್ರೇಲಿಯಾಈ ಜೋಡಿ ಇಂದು ನಿರ್ಮಿಸಿದ 134 ರನ್ ಗಳ ಜೊತೆಯಾಟ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ಪರ ಆರಂಭಿಕರಿಂದ ದಾಖಲಾದ 3ನೇ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ ಅಂದರೆ 1999ರಲ್ಲಿ ಮ್ಯಾಚೆಂಸ್ಟರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಯ್ಯೀದ್ ಅನ್ವರ್ ಮತ್ತು ವಜಾಹತುಲ್ಲಾ ವಸ್ತಿ ಜೋಡಿ ಮೊದಲ ವಿಕೆಟ್ ಗೆ 194 ರನ್ ಗಳ ಜೊತೆಯಾಟವಾಡಿತ್ತು. ಇದು ವಿಶ್ವಕಪ್ ನಲ್ಲಿ ಪಾಕಿಸ್ತಾನದ ಪರ ಆರಂಭಿಕರು ದಾಖಲಿಸಿದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. 194 - , , , 1999 159 - , , , 1975 134 - , -- , , 2023 120 - , , , 2015 113* - , , , 2011 99 - , , , 1979ಇದನ್ನೂ ಓದಿ: ಐಸಿಸಿ ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹೊರಕ್ಕೆ!ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡದ ಆರಂಭಿಕರ ಗರಿಷ್ಠ ರನ್ ಜೊತೆಯಾಟ ಅಂತೆಯೇ ಇದೇ ಜೋಡಿ ಆಸ್ಚ್ರೇಲಿಯಾ ವಿರುದ್ಧವೂ ದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ 2ನೇ ಗರಿಷ್ಟ ಆರಂಭಿಕ ಜೊತೆಯಾಟವಾಗಿದೆ. ಇದಕ್ಕೂ ಮೊದಲು 1985ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಮೊಹ್ಸಿನ್ ಖಾನ್ ಮತ್ತು ಮುದಸ್ಸರ್ ನಜರ್ ಜೋಡಿ 141 ರನ್ ಗಳನ್ನು ಕಲೆಹಾಕಿತ್ತು. ಇದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡದ ಆರಂಭಿಕರು ದಾಖಲಿಸಿರುವ ಗರಿಷ್ಠ ಆರಂಭಿಕ ಜೊತೆಯಾಟವಾಗಿದೆ. 141 - , , , 1985 134 - , --, , 2023 129 - , , , 2012 126 - , , , 2014