ಐವರು ಯುವ ಆಟಗಾರರಿಗೆ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಭಾರತ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ವೊಡಾಪೋನ್ ಟೆಸ್ಟ್‌ ಸರಣಿಗೆ 17 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ನವದೆಹಲಿ: ಭಾರತ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ವೊಡಾಪೋನ್ ಟೆಸ್ಟ್‌ ಸರಣಿಗೆ 17 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಉದಯೋನ್ಮುಖ ಪ್ರತಿಭೆ ಪುಕೊವಸ್ಕಿ ಹಾಗೂ ಕ್ಯಾಮರೊನ್‌ ಗ್ರೀನ್‌ ಸೇರಿದಂತೆ ಐವರು ಯುವ ಆಟಗಾರರು ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪಿನ್ನರ್‌ ಮಿಚೆಲ್‌ ಸ್ವೆಪ್ಸನ್ ಹಾಗೂ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಮಿಚೆಲ್‌ ನೇಸರ್‌ ಮತ್ತು ಶೇನ್‌ ಅಬಾಟ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಇನ್ನುಳಿದ ಮೂವರು ಆಟಗಾರರಾಗಿದ್ದಾರೆ. ಟೆಸ್ಟ್‌ ತಂಡಕ್ಕೆ ಹಿರಿಯ ವೇಗಿ ಪ್ಯಾಟ್‌ ಕಮಿನ್ಸ್ ಅವರನ್ನು ಉಪ ನಾಯಕನಾಗಿ ಆಯ್ಕೆ ಮಾಡಲಾಗಿದ್ದು. ಎಂದಿನಂತೆ ಟಿಮ್‌ ಪೈನ್‌ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.ರಾಷ್ಟ್ರೀಯ ತಂಡದ ಟೆಸ್ಟ್‌ ತಂಡದ ಜತೆಗೆ ಕ್ರಿಕೆಟ್‌ ಆಸ್ಟ್ರೇಲಿಯಾ, ಮುಖ್ಯ ತಂಡಕ್ಕೆ ಆಯ್ಕೆಯಾದ 9 ಮಂದಿ ಸೇರಿದಂತೆ ಒಟ್ಟು 19 ಸದಸ್ಯರ ಆಸ್ಟ್ರೇಲಿಯಾ ಎ ತಂಡವನ್ನು ಪ್ರಕಟಿಸಲಾಗಿದೆ. ಕೋವಿಡ್‌-19 ಸಾಂಕ್ರಾಮಿಕ ರೋಗ ಆವರಿಸುವುದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗಳಲ್ಲಿ ಕೊನೆಯ ಬಾರಿ ಆಡಿತ್ತು. ಇದೀಗ ಹೊಸದಾಗಿ ಭಾರತದ ವಿರುದ್ಧ ಯುವ ಪ್ರತಿಭೆಗಳೊಂದಿಗೆ ಕಣಕ್ಕೆ ಇಳಿಯುತ್ತಿದೆ. ಮಾರ್ಷ್‌ ಶೆಫಿಲ್ಡ್‌ ಶೀಲ್ಡ್‌ನಲ್ಲಿ ಅತ್ಯುತ್ತಮ ಅಸಾಧಾರಣ ಪ್ರದರ್ಶನ ತೋರಿದ ಕ್ಯಾಮೆರೊನ್‌ ಗ್ರೀನ್‌ ಹಾಗೂ ಅಬಾಟ್‌ ಸೇರಿದಂತೆ ಐವರು ಪ್ರತಿಭೆಗಳನ್ನು ಮೊದಲ ಬಾರಿ ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಐವರು ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಮಾಡಲಾಗಿದೆ. ಭಾರತ ವಿರುದ್ಧದ ಆಸ್ಟ್ರೇಲಿಯಾ ಟೆಸ್ಟ್ ತಂಡ: ಟಿಮ್‌ ಪೈನ್‌ (ನಾಯಕ), ಶೇನ್‌ ಅಬಾಟ್‌, ಜೋಬರ್ನ್ಸ್‌, ಪ್ಯಾಟ್‌ ಕಮಿನ್ಸ್, ಕ್ಯಾಮರೊನ್‌ ಗ್ರೀನ್‌, ಜಾಶ್‌ ಹೇಜಲ್‌ವುಡ್‌, ಟ್ರಾವಿಸ್‌ ಹೆಡ್‌, ಮಾರ್ನಸ್‌ ಲಾಬುಶೇನ್‌, ನೇಥನ್‌ ಲಿಯಾನ್‌, ಮಿಚೆಲ್‌ ನೇಸರ್‌, ಜೇಮ್ಸ್ ಪ್ಯಾಟಿನ್ಸನ್‌, ವಿಲ್‌ ಪುಕೊವಸ್ಕಿ, ಸ್ಟೀವನ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಮಿಚೆಲ್‌ ಸ್ವೆಪ್ಸನ್, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್‌ಆಸ್ಟ್ರೇಲಿಯಾ (ಎ) ತಂಡ: ಶೇನ್‌ ಅಬಾಟ್‌, ಆಷ್ಟನ್‌ ಅಗರ್‌, ಜೋ ಬರ್ನ್ಸ್, ಜಾಕ್ಸನ್‌ ಬರ್ಡ್, ಅಲೆಕ್ಸ್ ಕ್ಯಾರಿ(ವಿ.ಕೀ), ಹ್ಯಾರಿ ಕಾನ್ವೆ, ಕ್ಯಾಮರೊನ್‌ ಗ್ರೀನ್, ಮಾರ್ಕಸ್‌ ಹ್ಯಾರಿಸ್‌, ಟ್ರಾವಿಸ್‌ ಹೆಡ್‌, ಮೊಯ್ಸೆಸ್‌ ಹೆನ್ರಿಕ್‌, ನಿಕ್‌ ಮ್ಯಾಡಿಸನ್‌, ಮಿಚೆಲ್‌ ಮಾರ್ಷ್‌, ಮಿಚೆಲ್‌ ನೇಸರ್‌, ಟಿಮ್ ಪೈನ್‌, ಜೇಮ್ಸ್ ಪ್ಯಾಟಿನ್ಸನ್‌, ವಿಲ್‌ ಪುಕೊವಸ್ಕಿ, ಮಾರ್ಕ್‌ ಸ್ಟೆಕೆಟೀ, ವಿಲ್‌ ಸುದರ್ಲೆಂಡ್‌, ಮಿಚೆಲ್‌ ಸ್ವೆಪ್ಸನ್