ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ; 1-0 ಮುನ್ನಡೆ ಮುಂಬೈ ನಲ್ಲಿ ನಡೆದ ಭಾರತ-ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಪ್ರವಾಸಿ ತಂಡವನ್ನು 2 ರನ್ ಗಳ ಅಂತರದಿಂದ ಮಣಿಸಿ ರೋಚಕ ಜಯವನ್ನು ತನ್ನದಾಗಿಸಿಕೊಂಡಿದೆ. ಮುಂಬೈ: ಮುಂಬೈ ನಲ್ಲಿ ನಡೆದ ಭಾರತ-ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಪ್ರವಾಸಿ ತಂಡವನ್ನು 2 ರನ್ ಗಳ ಅಂತರದಿಂದ ಮಣಿಸಿ ರೋಚಕ ಜಯವನ್ನು ತನ್ನದಾಗಿಸಿಕೊಂಡಿದೆ. ಆರಂಭದಲ್ಲಿ ಲಂಕಾ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿತ್ತು. ಆದರೆ ಶಿವಂ ಮಾವಿ ಅವರ ಬೌಲಿಂಗ್ ನಿಂದಾಗಿ ಕೊನೆಯ ಕ್ಷಣದಲ್ಲಿ ಲಂಕಾ ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡಿತ್ತು.ಭಾರತ ನೀಡಿದ್ದ 163 ರನ್ ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಪಡೆಗೆ ಕೊನೆಯ ಓವರ್ ವೇಳೆಗೆ ಗೆಲ್ಲುವುದಕ್ಕೆ 13 ರನ್ ಗಳ ಅಗತ್ಯವಿತ್ತು. ಅಕ್ಷರ್ ಪಟೇಲ್ ಅವರು ಎಸೆದ ಕೊನೆಯ ಓವರ್ ನಲ್ಲಿ ಮೊದಲ 2 ಎಸೆತಗಳಲ್ಲಿ ತಲಾ ಒಂದು ರನ್ ಮೂರನೇ ಎಸೆತದಲ್ಲಿ 6, 4 ರಲ್ಲಿ ಯಾವುದೇ ರನ್ ಬರಲಿಲ್ಲ 5 ಮತ್ತು 6 ನೇ ಎಸೆತದಲ್ಲಿ ಬ್ಯಾಟ್ಸ್ಮನ್ ಗಳು ವಿಕೆಟ್ ಒಪ್ಪಿಸುವ ಮೂಲಕ ಭಾರತ 2 ರನ್ ಗಳ ಜಯ ಗಳಿಸಿತು.ಇದನ್ನೂ ಓದಿ: ಮೊದಲ ಟಿ20: ಲಂಕಾಕ್ಕೆ 163 ರನ್ ಗುರಿ ನೀಡಿದ ಟೀಂ ಇಂಡಿಯಾಭಾರತದ ಬ್ಯಾಟಿಂಗ್ ವಿಭಾದಲ್ಲಿಯೂ ಅಕ್ಷರ್ ಪಟೇಲ್ ಮಿಂಚಿದರು, ದೀಪಕ್ ಹೂಡಾ ಸಹ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಲಿಂಗ್ ವಿಭಾಗದಲ್ಲಿ ಶಿವಂ ಮಾವಿ ಗಮನ ಸೆಳೆದರು ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿಸಿದೆ