2023: ಟ್ರಾವಿಸ್ ಹೆಡ್ ಭರ್ಜರಿ ಶತಕ, ನ್ಯೂಜಿಲೆಂಡ್ ಗೆ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ ಮದಗಜಗಳು ಕಾದಾಡುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಪ್ರಬಲ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ. ಧರ್ಮಶಾಲಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ( 2023) ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ ಮದಗಜಗಳು ಕಾದಾಡುತ್ತಿದ್ದು, ನ್ಯೂಜಿಲೆಂಡ್ ( ) ವಿರುದ್ಧ ಪ್ರಬಲ ಆಸ್ಟ್ರೇಲಿಯಾ () ಬೃಹತ್ ಮೊತ್ತ ಪೇರಿಸಿದೆ.ಧರ್ಮಶಾಲಾ ()ದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ( ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಚ್ರೇಲಿಯಾ () ತಂಡ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡಿತು. ಆರಂಭಿಕರಾದ ಟ್ರಾವಿಸ್ ಹೆಡ್ ( ) (109 ರನ್) ಶತಕ ಮತ್ತು ಡೇವಿಡ್ ವಾರ್ನರ್ (81 ರನ್) ( ) ಆರ್ಧಶತಕದ ಮೂಲಕ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 175 ರನ್ ಗಳ ಜೊತೆಯಾಟವಾಡಿತು.ಇದನ್ನೂ ಓದಿ: ಐಸಿಸಿ ವಿಶ್ವಕಪ್: ಪಾಕಿಸ್ತಾನಕ್ಕೆ ಮತ್ತೆ ಸೋಲು, 1 ವಿಕೆಟ್ ನಿಂದ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವುಬಳಿಕ ಮಿಚೆಲ್ ಮಾರ್ಷ್ (36 ರನ್), ಗ್ಲೆನ್ ಮ್ಯಾಕ್ಸ್ ವೆಲ್ (41 ರನ್) ( ), ಜೋಷ್ ಇಂಗ್ಲಿಸ್ (38 ರನ್) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್) ಬ್ಯಾಟಿಂಗ್ ನೆರವಿನಿಂದ 49.2 ಓವರ್ ನಲ್ಲಿ 388 ರನ್ ಗಳಿ ಸರ್ವಪತನ ಕಂಡಿತು.ಆ ಮೂಲಕ ನ್ಯೂಜಿಲೆಂಡ್ ಗೆ 389ರನ್ ಗಳ ಬೃಹತ್ ಗುರಿ ನೀಡಿದೆ. ನ್ಯೂಜಿಲೆಂಡ್ ( ) ಪರ ಟ್ರೆಂಟ್ ಬೌಲ್ಟ್ ( ) ಮತ್ತು ಗ್ಲೆನ್ ಫಿಲಿಪ್ಸ್ ತಲಾ 3 ವಿಕೆಟ್ ಪಡೆದರೆ, ಮೆಚೆಲ್ ಸ್ಯಾಂಥ್ನರ್ 2, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಂ ತಲಾ 1 ವಿಕೆಟ್ ಪಡೆದರು. ಸ್ಯಾಂಥ್ನರ್ 10 ಓವರ್ ನಲ್ಲಿ 80ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.