2023, 2ನೇ ಸೆಮಿ ಫೈನಲ್: ಆಸಿಸ್ ಗೆ ಗೆಲ್ಲಲು ದಕ್ಷಿಣ ಆಫ್ರಿಕಾ 213 ರನ್ ಸಾಧಾರಣ ಗುರಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡ 213ರನ್ ಗಳ ಸಾಧಾರಣ ಗುರಿ ನೀಡಿದೆ. ಕೋಲ್ಕತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ( 2023)ಯ 2ನೇ ಸೆಮಿ ಫೈನಲ್ (2nd -) ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ () ತಂಡಕ್ಕೆ ಗೆಲ್ಲಲು ದಕ್ಷಿಣ ಆಫ್ರಿಕಾ ( ) ತಂಡ 213ರನ್ ಗಳ ಸಾಧಾರಣ ಗುರಿ ನೀಡಿದೆ.ಕೋಲ್ಕತಾದ ಈಡನ್ ಗಾರ್ಡೆನ್ಸ್ ( ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 49.4 ಓವರ್ ನಲ್ಲಿ 212 ರನ್ ಗಳಿಗೆ ಆಲೌಟ್ ಆಯಿತು.ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಭಾರತೀಯ ಸ್ಪಿನ್ನರ್ ಗಳಿಗೆ ನೆರವಾಗುವಂತೆ ಪಿಚ್ ಬದಲಾಯಿಸಲಾಗುತ್ತಿದೆಯೇ? ಗವಾಸ್ಕರ್ ಹೇಳಿದ್ದು ಹೀಗೆ...ಇನ್ನಿಂಗ್ಸ್ ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ದಕ್ಷಿಣ ಆಫ್ರಿಕಾ ತಂಡ 212ರನ್ ಗಳಿಗೆ ಸರ್ವಪತನ ಕಂಡಿತು. ಆಫ್ರಿಕಾ ಪರ ಡೇವಿಡ್ ಮಿಲ್ಲರ್ ( ) ಶತಕ (101) ಮತ್ತು ಹೆನ್ರಿಚ್ ಕ್ಲಾಸನ್ ( ) (47) ಹೊರತು ಪಡಿಸಿದರೆ ಉಳಿದಾವ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಆಸ್ಟ್ರೇಲಿಯಾದ ವೇಗಿಗಳ ಮಾರಕ ಬೌಲಿಂಗ್ ಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 49.4 ಓವರ್ ನಲ್ಲಿ 212 ರನ್ ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಅನುಭವಿ ಮಿಚೆಲ್ ಸ್ಟಾರ್ಕ್ ( ), ನಾಯಕ ಪ್ಯಾಟ್ ಕಮಿನ್ಸ್ ( ) ತಲಾ ಮೂರು ವಿಕೆಟ್ ಪಡೆದರೆ, ಜಾಶ್ ಹೇಜಲ್ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದರು.