ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ; ಬಾಂಗ್ಲಾಗೆ 2-1 ಸರಣಿ ಜಯ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ತಂಡ 227 ರನ್‌ಗಳಿಂದ ಮಣಿಸಿದ್ದು,. 3 ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಚಿತ್ತಗಾಂಗ್‌: ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ತಂಡ 227 ರನ್‌ಗಳಿಂದ ಮಣಿಸಿದ್ದು,. 3 ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.ಭಾರತ ನೀಡಿದ 410 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ 34 ಓವರ್ ಗಳಲ್ಲಿ 182 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 227ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಜಯದ ಹೊರತಾಗಿಯೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಸೋಲು ಕಂಡಿದೆ.3RD . 227 () ://./ #BANvINDಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್‌ ಗಳಿಸಿತ್ತು. ಇಶಾನ್‌ ಕಿಶನ್‌ ಅವರು ದ್ವಿಶತಕ (210) ಸಿಡಿಸಿದರೆ, ಕೊಹ್ಲಿ ಶತಕ (113) ಗಳಿಸಿದರು. ಬೃಹತ್ ಗುರಿ ಬೆನ್ನು ಹತ್ತಿದ ಬಾಂಗ್ಲಾ ಪಡೆ 34 ಓವರ್‌ಗಳಲ್ಲಿ 182ರನ್‌ಗಳಿಗೆ ಸರ್ವ ಪತನ ಕಂಡಿತು.ಇದನ್ನೂ ಓದಿ: ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯ: ಇಶಾನ್ ಕಿಶಾನ್, ಕೊಹ್ಲಿ ಅಬ್ಬರ; 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿದ ಭಾರತಬಾಂಗ್ಲಾಪರ ಶಕೀಬ್ ಅಲ್ ಹಸನ್ 43 ರನ್ ಗಳಿಸಿದರೆ, ನಾಯಕ ಲಿಟನ್ ದಾಸ್ 29ರನ್, ಯಾಸಿರ್ ಅಲಿ 25 ಮತ್ತು ಮಹಮದುಲ್ಲಾ 20 ರನ್ ಗಳಿಸಿದರು.