ಪಾಕ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಕೊಹ್ಲಿ-ರಾಹುಲ್ ಕೊಲಂಬೋದ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ-ಪಾಕ್ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ನೇ ಶತಕ ದಾಖಲಿಸಿದ್ದಾರೆ. ಕೊಲಂಬೊ: ಕೊಲಂಬೋದ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ-ಪಾಕ್ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ನೇ ಶತಕ ದಾಖಲಿಸಿದ್ದಾರೆ. ಇದೇ ವೇಳೆ ರಾಹುಲ್ ಏಕದಿನ ಪಂದ್ಯ ವಿಭಾಗದಲ್ಲಿ ತಮ್ಮ ವೃತ್ತಿ ಜೀವನದ 6 ನೇ ಶತಕ ದಾಖಲಿಸಿದ್ದಾರೆ. ಕೊಹ್ಲಿ-ರಾಹುಲ್ ಶತಕದ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ ಈ ವರೆಗೂ (48.1 ಓವರ್) 332 ರನ್ ಗಳನ್ನು ಗಳಿಸಿದೆ. ಇದನ್ನೂ ಓದಿ: ಏಷ್ಯಾಕಪ್ 2023: ಪಾಕ್-ಭಾರತ ಪಂದ್ಯಕ್ಕೆ ಮಳೆ ಅಡ್ಡಿ, ಪಂದ್ಯ ಸ್ಥಗಿತ ವೇಳೆ ಭಾರತ 147/2!ರಾಹುಲ್-ಕೊಹ್ಲಿ 183 ಎಸೆತಗಳಲ್ಲಿ ಭರ್ಜರಿ 209 ರನ್ ಗಳ ಜೊತೆಯಾಟ ನೀಡಿ ಭಾರತ ಕ್ರಿಕೆಟ್ ತಂಡ ಎದುರಾಳಿ ಪಾಕ್ ಗೆ ಅತ್ಯುತ್ತಮ ಸವಾಲು ನೀಡುವ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ಪಾಕ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತದ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸಲು ಪಾಕ್ ಬೌಲರ್ ಗಳು ಹರಸಾಹಸಪಡುತ್ತಿದ್ದಾರೆ.