ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ದಾಖಲೆ ಬರೆದ ಗುಜರಾತ್ ಟೈಟನ್ಸ್ ಐಪಿಎಲ್ ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟನ್ಸ್ ತಂಡ ದಾಖಲೆಯೊಂದನ್ನು ನಿರ್ಮಿಸಿದೆ. ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟನ್ಸ್ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.ಇದನ್ನೂ ಓದಿ: ಐಪಿಎಲ್ 2023 ಫೈನಲ್: ಶತಕದಂಚಿನಲ್ಲಿ ಮುಗ್ಗರಿಸಿದ ಸಾಯಿ ಸುದರ್ಶನ್, ಚೆನ್ನೈ ತಂಡಕ್ಕೆ ಗೆಲ್ಲಲು 215ರನ್ ಬೃಹತ್ ಗುರಿಈ ಹಿಂದೆ 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡ 208 ರನ್ ಗಳಿಸಿತ್ತು. ಇದು ಈ ವರೆಗಿನ ಐಪಿಎಲ್ ಫೈನಲ್ ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಆದರೆ ಇಂದು ಈ ದಾಖಲೆಯನ್ನು ಗುಜರಾತ್ ತಂಡ ಹಿಂದಿಕ್ಕಿದೆ.ಉಳಿದಂತೆ ಇದೇ ಟೂರ್ನಿ ಪ್ಲೇಆಫ್ ಹಂತದ 2ನೇ ಕ್ವಾಲಿಫಿಕೇಷನ್ ಪಂದ್ಯದಲ್ಲಿ ಇದೇ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 233 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಪ್ಲೇ ಆಫ್ ಹಂತದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಮೊತ್ತವಾಗಿದೆ. ಇದಕ್ಕೂ ಮೊದಲು 2014ರಲ್ಲಿ ಇದೇ ಮುಂಬೈ ವಿರುದ್ಧ ಪಂಜಾಬ್ ತಂಜ 226ರನ್ ಗಳಿಸಿದ್ದು ಈ ವರೆಗಿನ ಪ್ಲೇಆಫ್ ಹಂತದ ತಂಡವೊಂದರ ಗರಿಷ್ಟ ಮೊತ್ತವಾಗಿತ್ತು.ಇದನ್ನೂ ಓದಿ: ಐಪಿಎಲ್ 2023 ಫೈನಲ್: ಬಿಗ್‌ ಸ್ಕ್ರೀನ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌, ಅಭಿಮಾನಿಗಳ ಆಕ್ರೋಶ! 233/3 - , , 2023 Q2 226/6 - , , 2014 Q2 222/5 - , , 2012 Q2 214/4 - , , 2023 208/7 - , , 2016