2025: ಮುಂದಿದೆ ಚಾಂಪಿಯನ್ಸ್ ಟ್ರೋಫಿ ಕದನ; ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸುವ ಸಾಧ್ಯತೆ ಇಲ್ಲ! ಏಷ್ಯಾಕಪ್ ಟೂರ್ನಿ ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( ) ಮತ್ತು ಭಾರತ ಕ್ರಿಕೆಟ್ ಮಂಡಳಿ ( ) ನಡುವೆ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ( 2025) ಟೂರ್ನಿ ಆಯೋಜನೆ ವಿಚಾರವಾಗಿ ಮತ್ತೊಂದು ಸುತ್ತಿನ ಕದನ ಏರ್ಪಡುವ ಸಾಧ್ಯತೆ ಇದೆ ನವದೆಹಲಿ: ಏಷ್ಯಾಕಪ್ ಟೂರ್ನಿ ( 2023) ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( ) ಮತ್ತು ಭಾರತ ಕ್ರಿಕೆಟ್ ಮಂಡಳಿ ( ) ನಡುವೆ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ( 2025) ಟೂರ್ನಿ ಆಯೋಜನೆ ವಿಚಾರವಾಗಿ ಮತ್ತೊಂದು ಸುತ್ತಿನ ಕದನ ಏರ್ಪಡುವ ಸಾಧ್ಯತೆ ಇದೆ.ಹೌದು.. ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ( 2023)ಯೇ ಇನ್ನೂ ಮುಗಿದಿಲ್ಲ.. ಅದಾಗಲೇ ಪಿಸಿಬಿ () ಮತ್ತು ಬಿಸಿಸಿಐ () ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ( 2025) ಕದನ ಆರಂಭವಾಗಿದ್ದು, ಪಾಕಿಸ್ತಾನ ()ದಲ್ಲಿ ಆಯೋಜನೆಯಾಗಿರುವ ಈ ಮಹತ್ವದ ಟೂರ್ನಿಗೆ ಬಿಸಿಸಿಐ ಭಾರತ ತಂಡ ( )ವನ್ನು ಕಳುಹಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ 2025 ರ ಆತಿಥ್ಯ ವಹಿಸುತ್ತಿದ್ದು, ರಾಜಕೀಯವಾಗಿ ಭಾರತ ಮತ್ತು ಪಾಕಿಸ್ತಾನ ( ) ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗಿಲ್ಲದ ಕಾರಣ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.ಇದನ್ನೂ ಓದಿ: 2023: ಪಾಕ್ ತಂಡದ ಕಳಪೆ ಪ್ರದರ್ಶನ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ರಾಜಿನಾಮೆಒಂದೆರಡು ತಿಂಗಳ ಹಿಂದೆ, ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ್ದರಿಂದ ಬಿಸಿಸಿಐ ವಿರುದ್ಧ ಪಿಸಿಬಿ ಹೋರಾಟವು ತೀವ್ರವಾಗಿತ್ತು. ಪಾಕಿಸ್ತಾನವು ಪಂದ್ಯಾವಳಿಯ ಆತಿಥ್ಯ ವಹಿಸಿತ್ತು, ಆದರೆ ಭಾರತ ಸರ್ಕಾರವು ತಡೆ ಒಡ್ಡಿದ್ದರಿಂದ ಪಂದ್ಯಾವಳಿಯ ಸ್ವರೂಪವನ್ನು ಬದಲಾಯಿಸಲು ( ) ಗೆ ಒತ್ತಾಯಿಸಲಾಯಿತು. ಇದರ ಪರಿಣಾಮವಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು ಮತ್ತು ಪಾಕಿಸ್ತಾನವು 4 ಪಂದ್ಯಗಳನ್ನು ಮತ್ತು ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಅಂದಹಾಗೆ ಈ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ, 7ನೇ ಸ್ಥಾನಕ್ಕಾಗಿ ಇಂಗ್ಲೆಂಡ್-ಆಫ್ಘಾನಿಸ್ತಾನ ಪೈಪೋಟಿಒಂದು ವೇಳೆ ಪಾಕಿಸ್ತಾನ ತನ್ನ ನಿಲುವು ಬದಲಿಸದೇ ಹಠಮಾರಿ ಧೋರಣೆ ಮುಂದುವರೆಸಿದ್ದರೆ ಭಾರತ ತಂಡ ವಿಲ್ಲದೇ ಟೂರ್ನಿ ಆಯೋಜನೆ ಮಾಡಬೇಕಿತ್ತು. ಆದರೆ ಅದು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೇ ಪಿಸಿಬಿ ಶ್ರೀಲಂಕಾದಲ್ಲಿ ಪಂದ್ಯ ಆಯೋಜನೆಗೆ ಒಪ್ಪಿಗೆ ಸೂಚಿಸಿತ್ತು.ICCಗೆ ಕಗ್ಗಂಟಾಗಲಿದೆ ತಟಸ್ಥ ಸ್ಥಳದ ವಿಚಾರ ಮೂಲತಃ ಮತ್ತು ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನವು ಪಂದ್ಯಾವಳಿಯ ಆತಿಥೇಯವಾಗಿದೆ. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡದಿರುವುದರಿಂದ ಮತ್ತೆ ಪಿಸಿಬಿ ಮತ್ತು ಬಿಸಿಸಿಐ ಸಂಘರ್ಷಕ್ಕೆ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಮತ್ತೆ ಪಾಕಿಸ್ತಾನ ಬಿಸಿಸಿಐ ಮುಂದೆ ಮಂಡಿಯೂರಿದರೆ ಆಗ ಉಭಯ ತಂಡಗಳಿಗೂ ತಟಸ್ಥ ಸ್ಥಳವನ್ನು ಆಯ್ಕೆ ಮಾಡುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ()ಗೆ ದೊಡ್ಡ ಕೆಲಸವಾಗಿರಲಿದೆ. ಆಗ ಐಸಿಸಿ ( ) ಆಯ್ಕೆ ಪಟ್ಟಿಯಲ್ಲಿ ಶ್ರೀಲಂಕಾ ಮತ್ತು ಯುಎಇ ಅಗ್ರ ಸ್ಥಾನಗಳಲ್ಲಿರಲಿವೆ ಎಂದು ಹೇಳಲಾಗಿದೆ. ಭಾರತ ತಂಡ ಕೊನೆಯ ಬಾರಿಗೆ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಗೆದಿದ್ದರು. 2017ರಲ್ಲಿ ಪಾಕಿಸ್ತಾನ ತಂಡ ಭಾರತವನ್ನು 180 ರನ್‌ಗಳಿಂದ ಸೋಲಿಸಿದ ನಂತರ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಮತ್ತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2029 ರ ಆವೃತ್ತಿಯು ಭಾರತದಲ್ಲಿ ನಡೆಯಲಿದೆ.ಇದನ್ನೂ ಓದಿ: : ರಿಷಬ್ ಪಂತ್ ಚೇತರಿಕೆ, ದೇಶೀಯ ಕ್ರೆಕೆಟ್ ನಲ್ಲಿ ಭಾಗಿ, ಟೀಂ ಇಂಡಿಯಾಗೆ ಈ ಸರಣಿಯಲ್ಲಿ ಲಭ್ಯ!ಐಸಿಸಿ ವಿಶ್ವಕಪ್‌ನ ಟಾಪ್ 7 ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಹಾಲಿ ವಿಶ್ವಕಪ್‌ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ 9 ಹಾಗೂ 10ನೇ ಸ್ಥಾನಗಳಲ್ಲಿರುವ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್‌ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕು. ಏಳು ಮತ್ತು ಎಂಟನೇ ಸ್ಥಾನದಲ್ಲಿರುವ ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್‌ ತಂಡಗಳು ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅದೇ ಸ್ಥಾನವನ್ನು ಉಳಿಸಿಕೊಂಡರೆ, ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ.