ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 190 ರನ್ ಗಳನ್ನು ದಾಖಲಿಸಿದ್ದರು. ನಂತರ ಈ ಗುರಿಯನ್ನು ಬೆಂಬೆತ್ತಿದ ಸ್ಕಾಟ್ ಲೆಂಡ್ ತಂಡ 60 ರನ್ ಗಳಿಸುವಷ್ಟರಲ್ಲೇ ಆಲೌಟ್. ದುಬೈ: ತಾಲಿಬಾನ್ ಆಳ್ವಿಕೆಯಡಿ ನಲುಗುತ್ತಿರುವ ಆಫ್ಘನ್ನರಿಗೆ ಸಂತಸ ತರುವ ಸುದ್ದಿ ಟಿ20 ವಿಶ್ವಕಪ್ ನಲ್ಲಿ ಕೇಳಿಬಂದಿದೆ. ಇಂದು ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ, ಸ್ಕಾಟ್ ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 190 ರನ್ ಗಳನ್ನು ದಾಖಲಿಸಿದ್ದರು. ನಂತರ ಈ ಗುರಿಯನ್ನು ಬೆಂಬೆತ್ತಿದ ಸ್ಕಾಟ್ ಲೆಂಡ್ ತಂಡ 60 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ರಶೀದ್ ಖಾನ್ ನಾಲ್ಕು ವಿಕೆಟ್ ಪಡೆದು ಸಂಭ್ರಮಿಸಿದರು.ಇದರೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ 130 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಅಫ್ಘಾನಿಸ್ತಾನದ ಮುಜೀಬ್ ಉರ್ ರಹಮಾನ್ ಪಾತ್ರರಾಗಿದ್ದಾರೆ. ಗೌರವ ಸ್ವೀಕರಿಸುತ್ತಾ ಮಾತನಾಡಿದ ಅವರು ತಂಡವನ್ನು ಹುರಿದುಂಬಿಸಿದ ಫ್ಯಾನ್ಸ್ ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆ; ವೇಗಿ ಮೊಹಮ್ಮದ್ ಬೆಂಬಲಕ್ಕೆ ನಿಂತ ಕ್ರಿಕೆಟಿಗರುಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತದ ಸೋಲಿನ ಬಗ್ಗೆ ಇತರ ಆಟಗಾರರು ಹೇಳಿದ್ದೇನು?ಟಿ20 ವಿಶ್ವಕಪ್ ನಲ್ಲಿ ಭಾರತದ ಭವಿಷ್ಯ: ಪ್ರತಿ ಪಂದ್ಯ ಗೆಲ್ಲಲೇಬೇಕಾ?; ಸೋತರೆ ಏನಾಗಲಿದೆ? ಫೈನಲ್ ಗೆ ಹೋಗುತ್ತಾ ಟೀಂ ಇಂಡಿಯಾ?ಅತಿಯಾದ ಆತ್ಮವಿಶ್ವಾಸ ಬೇಡ: ತಂಡಕ್ಕೆ ಪಾಕ್‌ ನಾಯಕ ಬಾಬರ್ ಆಜಂ ಎಚ್ಚರಿಕೆ2 ಹೊಸ ಐಪಿಎಲ್ ತಂಡಗಳ ಸೇರ್ಪಡೆ: ಅಹಮದಾಬಾದ್, ಲಖನೌ ತಂಡಗಳ ಹರಾಜಿನಿಂದ 12,960 ಕೋಟಿ ರೂ. ಸಂಗ್ರಹ