ಐಪಿಎಲ್ 2023: ಕೋಲ್ಕತಾ ವಿರುದ್ಧ ಚೆನ್ನೈ ಸಿಡಿಲಬ್ಬರದ ಬ್ಯಾಟಿಂಗ್: ಹಲವು ದಾಖಲೆ ಧೂಳಿಪಟ 16ನೇ ಆವೃತ್ತಿಯ ಐಪಿಎಲ್ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ರನ್ ಮಳೆಯನ್ನೇ ಹರಿಸಿದ್ದು, ಈ ಒಂದೇ ಒಂದು ಇನ್ನಿಂಗ್ಸ್ ನಿಂದ ಐಪಿಎಲ್ ಇತಿಹಾಸದ ಪುಟಗಳಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಕೋಲ್ಕತಾ: 16ನೇ ಆವೃತ್ತಿಯ ಐಪಿಎಲ್ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ರನ್ ಮಳೆಯನ್ನೇ ಹರಿಸಿದ್ದು, ಈ ಒಂದೇ ಒಂದು ಇನ್ನಿಂಗ್ಸ್ ನಿಂದ ಐಪಿಎಲ್ ಇತಿಹಾಸದ ಪುಟಗಳಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.ಬ್ಯಾಟ್ಸ್ಮನ್ಗಳ ಸ್ವರ್ಗ ಎನಿಸಿರುವ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ಸ್ಪೋಟಿಸಿತು. ಒಂದೆಡೆ ಡೆವೋನ್ ಕಾನ್ವೆ, ಶಿವಂ ದುಬೆ, ಅಜಿಂಕ್ಯ ರಹಾನೆ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದರೆ, ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಕಬಳಿಸಲು ಪರದಾಡಿತು. ಪರಿಣಾಮ ಚೆನ್ನೈ ಬೃಹತ್ ಮೊತ್ತ ಕಲೆ ಹಾಕಿತು. ಕೆಕೆಆರ್ಗೆ 236 ರನ್ಗಳ ಟಾರ್ಗೆಟ್ ನೀಡಿದೆ.ಇದನ್ನೂ ಓದಿ: ಐಪಿಎಲ್-2023: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿಗೆ 7 ರನ್ ರೋಚಕ ಜಯಇದೊಂದು ಭರ್ಜರಿ ಇನ್ನಿಂಗ್ಸ್ ಮೂಲಕ ಸಿಎಸ್ ಕೆ ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.ಐಪಿಎಲ್ ಇತಿಹಾಸದ 3ನೇ ಗರಿಷ್ಠ ರನ್ ಇಂದು ಚೆನ್ನೈ ದಾಖಲಿಸಿದ 235 ರನ್ ಗಳ ಮೊತ್ತ ಐಪಿಎಲ್ ಇತಿಹಾಸದಲ್ಲಿ ಚೈನ್ನೈ ಪರ ದಾಖಲಾದ 3ನೇ ಗರಿಷ್ಠ ಮೊತ್ತವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ತಂಡ 246ರನ್ ಕಲೆಹಾಕಿತ್ತು. ಇದಕ್ಕೂ ಮೊದಲು ಅಂದರೆ 2008ರಲ್ಲಿ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ಗಳಿಸಿದ್ದ 240 ರನ್ ಗಳು 2ನೇ ಸ್ಥಾನದಲ್ಲಿವೆ. ಇಂದಿನ ಮೊತ್ತ 3ನೇ ಸ್ಥಾನದಲ್ಲಿದೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಪಂದ್ಯಗಳಲ್ಲೂ ಎದುರಾಳಿ ತಂಡಗಳೂ ಕೂಡ 200ಕ್ಕೂ ಅಧಿಕ ಮೊತ್ತ ಕಲೆಹಾಕಿದ್ದವು. 246/5 , , 2010 240/5 , , 2008 235/4 , , 226/6 , , 2023 * 200 occasionsಐಪಿಎಲ್ ಇತಿಹಾಸದ ಗರಿಷ್ಠ ಸಿಕ್ಸರ್: ಸಿಎಸ್ ಕೆ 6ನೇ ಸ್ಥಾನ ಇನ್ನು ಇಂದಿನ ಪಂದ್ಯದಲ್ಲಿ ಸಿಎಸ್ ಕೆ ಪರ ಒಟ್ಟು 18 ಸಿಕ್ಸ್ ಗಳು ಬಂದಿದ್ದು, ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸಿಕ್ಸರ್ ಗಳು ಬಂದ 6ನೇ ಪಂದ್ಯವಾಗಿದೆ. 2013ರಲ್ಲಿ ಆರ್ ಸಿಬಿ ತಂಡ ಪಂಜಾಬ್ ವಾರಿಯರ್ಸ್ ವಿರುದ್ಧ 21 ಸಿಕ್ಸರ್ ಗಳನ್ನು ಸಿಡಿಸಿತ್ತು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 21 - , , 2013 20 - , , 2017 20 - , , 2016 18 - , , 2020 18 - , , 2015 18 - , , todayಇದನ್ನೂ ಓದಿ: ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ: ಶ್ರೀಸಾಗರ್ ಹೋಟೆಲ್ನಲ್ಲಿ ದೋಸೆ ಸವಿದ ವಿರುಷ್ಕಾಟೂರ್ನಿಯ ಗರಿಷ್ಠ ಬ್ಯಾಟಿಂಗ್ ಸ್ಟ್ರೈಕ್ ಇನ್ನು ಹಾಲಿ ಐಪಿಎಲ್ ಟೂರ್ನಿಯ ಗರಿಷ್ಠ ಬ್ಯಾಟಿಂಗ್ ಸ್ಟ್ರೈಕ್ ವಿಭಾಗದಲ್ಲೂ ಇಂದಿನ ಪಂದ್ಯ ಅಗ್ರಸ್ಥಾನಕ್ಕೇರಿದ್ದು, ಇಂದು ಚೆನ್ನೈ ತಂಡ ಅಜಿಂಕ್ಯ ರಹಾನೆ 199.04 ಸರಾಸರಿಯಲ್ಲಿ ಬ್ಯಾಟ್ ಬೀಸಿ ಕೇವಲ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ ಅಜೇಯ 71 ರನ್ ಗಳಿಸಿದ್ದಾರೆ. - 2023 ( 100 ): 199.04 - () 198.03 - () 188.80 - () 185.86 - () 168.49 - ()ಸಿಎಸ್ ಕೆ ಪರ ವೇಗದ ಅರ್ಧಶತಕ ಈ ಪಂದ್ಯದಲ್ಲಿ ಚೆನ್ನೈ ತಂಡದ ಶಿವಂ ದುಬೆ ಕೇವಲ 20 ಎಸೆತಗಳಲ್ಲಿ 50 ರನ್ ಚಚ್ಚಿದರು. ರಹಾನೆ ಜೊತೆಗೆ ಸಿಡಿದ ಶಿವಂ ದುಬೆ, ಕೆಕೆಆರ್ ಬೌಲರ್ಗಳ ಬೆವರಿಳಿಸಿದರು. ಕೇವಲ 20 ಎಸೆತಗಳಲ್ಲಿ 50 ರನ್ ಮುಟ್ಟಿದರು. ಅರ್ಧಶತಕದ ಬಳಿಕವೂ ದುಬೆ ಬ್ಯಾಟಿಂಗ್ ಅಬ್ಬರ ಮುಂದುವರೆಯಿತು. ಆದರೆ ಕುಲ್ವಂತ್ ಖೆಜ್ರೋಲಿಯಾ ಬೌಲಿಂಗ್ನಲ್ಲಿ ಜೇಸನ್ ರಾಯ್ಗೆ ವಿಕೆಟ್ ಒಪ್ಪಿಸಿದರು. ( ) 16 - , , 2014 19 - , , 2022 19 - , , 2023 20 - , , 2012 20 - , , 2021 20 - , , todayಇದನ್ನೂ ಓದಿ: ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ತುಂಡಾದ 'ಮುಂಬೈ' ವಿಕೆಟ್; ಪಂಜಾಬ್ ಗೆ 13 ರನ್ ಗಳ ರೋಚಕ ಜಯಭೇರಿಈಡನ್ ಗಾರ್ಡನ್ ನಲ್ಲಿ ಗರಿಷ್ಠ ಮೊತ್ತ ಸಿಎಸ್ಕೆ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗಳಿಸಿದ 235 ರನ್ ಗಳು ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ ಕೋಲ್ಕತಾ ತಂಡ ಮುಂಬೈ ವಿರುದ್ಧ ಇದೇ ಮೈದಾನದಲ್ಲಿ ಗಳಿಸಿದ್ದ 232 ರನ್ ಈ ವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.