2023: ನೆದರ್ಲ್ಯಾಂಡ್ ವಿರುದ್ಧ ಮುಗ್ಗರಿಸಿದ ಬಾಂಗ್ಲಾದೇಶ; 87 ರನ್ ಗಳಿಂದ ಸೋಲು! ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು 60 ರನ್ ಗಳಿಂದ ಮಣಿಸಿ ನೆದರ್ಲ್ಯಾಂಡ್ ಗೆಲುವು ಸಾಧಿಸಿದೆ. ಕೋಲ್ಕತ್ತಾ: ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು 60 ರನ್ ಗಳಿಂದ ಮಣಿಸಿ ನೆದರ್ಲ್ಯಾಂಡ್ ಗೆಲುವು ಸಾಧಿಸಿದೆ. ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲ್ಯಾಂಡ್ ನಿಗದಿತ ಓವರ್ ನಲ್ಲಿ 229 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 42.2 ಓವರ್ ನಲ್ಲಿ 142 ರನ್ ಗಳಿಗೆ ಆಲೌಟ್ ಆಗಿದ್ದು 87 ರನ್ ಗಳಿಗೆ ನೆದರ್ಲ್ಯಾಂಡ್ ಗೆ ಶರಣಾಯಿತು.ಇದನ್ನೂ ಓದಿ: 2023: 389 ರನ್‌ಗಳ ಬೃಹತ್ ಟಾರ್ಗೆಟ್ ನಲ್ಲಿ ನ್ಯೂಜಿಲ್ಯಾಂಡ್ ಅನ್ನು 5 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ! ನೆದರ್ಲ್ಯಾಂಡ್ ಪರ ವೆಸ್ಲಿ ಬ್ಯಾರೆಸಿ 41, ಸ್ಕಾಟ್ ಎಡ್ವರ್ಡ್ 68, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 35 ರನ್ ಪೇರಿಸಿದ್ದಾರೆ. ಬಾಂಗ್ಲಾ ಪರ ಬೌಲಿಂಗ್ ನಲ್ಲಿ ಶೋರಿಫುಲ್ ಇಸ್ಲಾಂ, ಟಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್ ಮತ್ತು ಮಹೇದಿ ಹಸನ್ ತಲಾ 2 ವಿಕೆಟ್ ಪಡೆದಿದ್ದಾರೆ.ಬಾಂಗ್ಲಾದೇಶ ಪರ ಮೆಹದಿ ಹಸನ್ 35, ಮಹಮ್ಮದುಲ್ಲಾ 20 ಮತ್ತು ಮುಸ್ತಫಿಜುರ್ ರೆಹಮಾನ್ 20 ರನ್ ಬಾರಿಸಿದ್ದಾರೆ. ನೆದರ್ಲ್ಯಾಂಡ್ ಪರ ಬೌಲಿಂಗ್ ನಲ್ಲಿ ಪಾಲ್ ವ್ಯಾನ್ ಮೀಕೆರೆನ್ 4 ವಿಕೆಟ್ ಪಡೆದರೆ ಬಾಸ್ ಡಿ ಲೀಡೆ 2 ವಿಕೆಟ್ ಪಡೆದಿದ್ದಾರೆ.