4ನೇ ಟಿ20 ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಆಘಾತ: ಸರಣಿಯಿಂದ ಹೊರನಡೆದ ಸ್ಫೋಟಕ ಬ್ಯಾಟರ್! ಆತಿಥೇಯ ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಆಘಾತ ಎದುರಾಗಿದ್ದು ಸ್ಫೋಟಕ ಬ್ಯಾಟರ್ ಸರಣಿಯಿಂದ ಹೊರನಡೆದಿದ್ದಾರೆ. ನವದೆಹಲಿ: ಆತಿಥೇಯ ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಆಘಾತ ಎದುರಾಗಿದ್ದು ಸ್ಫೋಟಕ ಬ್ಯಾಟರ್ ಸರಣಿಯಿಂದ ಹೊರನಡೆದಿದ್ದಾರೆ.ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಏಡನ್ ಮಾರ್ಕ್ರಾಮ್ ಮುಂದಿನ ಎರಡು ಪಂದ್ಯದಿಂದ ಹೊರಗುಳಿದಿದ್ದಾರೆ. ಐದು ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿಯೂ ಮಾರ್ಕ್ರಾಮ್ ಆಡಿರಲಿಲ್ಲ. ಇದೀಗ ಮುಂದಿನ ಎರಡು ಪಂದ್ಯಗಳಲ್ಲಿಯೂ ಅವರು ಆಡಲು ಸಾಧ್ಯವಾಗುವುದಿಲ್ಲ.ಇದನ್ನೂ ಓದಿ: ಐಸಿಸಿ ಟಿ20ಐ ರ್ಯಾಂಕಿಂಗ್: ಏಳನೇ ಸ್ಥಾನ ಜಿಗಿದ ಇಶಾನ್ ಕಿಶನ್ಮೊದಲ ಟಿ20 ಸರಣಿಗೂ ಮೊದಲು ಮಾರ್ಕ್ರಾಮ್ ಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಾಹಿತಿ ನೀಡಿತ್ತು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮಾರ್ಕ್ರಾಮ್ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇದೀಗ ಅವರು ಶೀಘ್ರದಲ್ಲೇ ದೇಶಕ್ಕೆ ಮರಳಲಿದ್ದಾರೆ.ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಜೂನ್ 17ರಂದು ನಡೆಯಲಿರುವ ನಾಲ್ಕನೇ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಲಿದೆ.