IPLನಲ್ಲಿ ಅತಿ ಹೆಚ್ಚು ಶತಕ ಸಿಡಿಸಿ ವಿಶ್ವದಾಖಲೆ ಬರೆದ ವಿರಾಟ್! ಗೇಯ್ಲ್ ದಾಖಲೆ ಪುಡಿಪುಡಿ! ಐಪಿಎಲ್ 2023 ರ ಟೂರ್ನಿಯ 70 ನೇ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರು: ಐಪಿಎಲ್ 2023 ರ ಟೂರ್ನಿಯ 70 ನೇ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮೇ.21 ರಂದು ಅಜೇಯ 101 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಫಾರ್ಮ್ಯಾಟ್ ನಲ್ಲಿ 7 ನೇ ಶತಕ ದಾಖಲಿಸಿದ್ದಾರೆ. ಇದನ್ನೂ ಓದಿ: 2023: ಕೊಹ್ಲಿ ಸ್ಫೋಟಕ ಶತಕ, ಗುಜರಾತ್ ಗೆ 198 ರನ್ ಗುರಿ ನೀಡಿದ RCBಈ ಹಿಂದೆ ಹೈದರಾಬಾದ್ ತಂಡದ ವಿರುದ್ಧ 65 ನೇ ಪಂದ್ಯದಲ್ಲಿ 6 ನೇ ಶತಕ ಭಾರಿಸುವ ಮೂಲಕ ಕೊಹ್ಲಿ ಕ್ರಿಸ್ ಗೇಯ್ಲ್ ದಾಖಲೆಯನ್ನು ಸರಿಗಟ್ಟಿದ್ದರು. ಈಗ 7 ನೇ ಶತಕ ದಾಖಲಿಸಿ ಗೇಯ್ಲ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.