ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ: ಉಳಿಕೆ ಪಂದ್ಯಗಳಿಗೆ ಬೂಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಗೆ ಸ್ಥಾನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಉಳಿದ ಪಂದ್ಯಗಳಿಗೆ ಗಾಯಗೊಂಡಿರುವ ಜಸ್ಪ್ರೀತ್ ಬೂಮ್ರಾ ಜಾಗಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಟೀಂ ಇಂಡಿಯಾ ಆಯ್ಕೆದಾರರ ಸಮಿತಿ ನೇಮಕ ಮಾಡಿದೆ. ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಉಳಿದ ಪಂದ್ಯಗಳಿಗೆ ಗಾಯಗೊಂಡಿರುವ ಜಸ್ಪ್ರೀತ್ ಬೂಮ್ರಾ ಜಾಗಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಟೀಂ ಇಂಡಿಯಾ ಆಯ್ಕೆದಾರರ ಸಮಿತಿ ನೇಮಕ ಮಾಡಿದೆ.ಬೂಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ಪ್ರಸ್ತುತ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾವಣೆಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.ಇದನ್ನೂ ಓದಿ: ಟಿ20 ವಿಶ್ವಕಪ್‌: ಟೀಂ ಇಂಡಿಯಾಗೆ ಆಘಾತ; ವೇಗಿ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದಲೇ ಔಟ್!ಗುವಾಹಟಿಯಲ್ಲಿ ಭಾನುವಾರ ಎರಡನೇ ಟಿ-20 ಹಾಗೂ ಇಂದೋರ್ ನಲ್ಲಿ ಮಂಗಳವಾರ ಮೂರನೇ ಟಿ-20 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಯಿಂದಲೂ ಜಸ್ಪ್ರೀತ್ ಬೂಮ್ರಾ ಹೊರಗೆ ಇರುವ ಸಾಧ್ಯತೆಯಿದೆ.