ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ 9 ರನ್ ವಿರೋಚಿತ ಸೋಲು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 9ರನ್ ಗಳ ವಿರೋಚಿತ ಸೋಲು ಕಂಡಿದೆ. ಲಖನೌ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 9ರನ್ ಗಳ ವಿರೋಚಿತ ಸೋಲು ಕಂಡಿದೆ.ಲಖನೌನ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 250ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ನಿಯಮಿತ ವಿಕೆಟ್ ಪತನದ ಹೊರತಾಗಿಯೂ 40 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 240 ರನ್ ಪೇರಿಸಿ ಕೇವಲ 9ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. @ - ! # 59 . ' # @ ../298jDemOitಭಾರತದ ಇನ್ನಿಂಗ್ಸ್ ನ ಕೊನೆಯಲ್ಲಿ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 9 ರನ್‌ಗಳ ರೋಚಕ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಮಳೆಯಿಂದಾಗಿ ನಡೆದ 40 ಓವರ್‌ಗಳ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿತು. ಕಠಿಣ ಗುರಿಯನ್ನು ಬೆನ್ನೆಟ್ಟಿದ ಭಾರತ 40 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 240 ರನ್‌ ಗಳಿಸಿತು.ಇದನ್ನೂ ಓದಿ: ಮೊದಲ ಏಕದಿನ: ಮಿಲ್ಲರ್-ಕ್ಲಾಸನ್ ಶತಕದ ಜೊತೆಯಾಟ, ಭಾರತಕ್ಕೆ 250ರನ್ ಗಳ ಬೃಹತ್ ಗುರಿ ನೀಡಿದ ದ.ಆಫ್ರಿಕಾಆರಂಭಿಕ ಆಟಗಾರರಾದ ನಾಯಕ ಶಿಖರ್‌ ಧವನ್‌ ಮತ್ತು ಶುಭಮನ್‌ ಗಿಲ್‌ ತಂಡದ ಮೊತ್ತ 8 ರನ್‌ ಗಳಿಸುವಷ್ಟರಲ್ಲಿ ಔಟಾದರು. ಋತುರಾಜ್‌ ಗಾಯಕ್‌ವಾಡ್‌ 19 ರನ್‌(42 ಎಸೆತ, 1 ಬೌಂಡರಿ) ಇಶನ್‌ ಕಿಶನ್‌ 20 ರನ್‌(37 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಚೇತರಿಕೆ ನೀಡಿದರು. ಶ್ರೇಯಸ್‌ ಅಯ್ಯರ್‌ ಬಿರುಸಿನ ಬ್ಯಾಟ್‌ ಮಾಡಿ 50 ರನ್‌(37 ಎಸೆತ, 8 ಬೌಂಡರಿ) ಚಚ್ಚಿದ್ದರು. ಸಂಜು ಸ್ಯಾಮ್ಸನ್‌ ಮತ್ತು ಶಾರ್ದೂಲ್‌ ಠಾಕೂರ್‌ 6ನೇ ವಿಕೆಟಿಗೆ 66 ಎಸೆತಗಳಿಗೆ 93 ರನ್‌ ಜೊತೆಯಾಟವಾಡಿದಾಗ ಭಾರತದ ಗೆಲುವಿನ ಆಸೆ ಚಿಗುರಿತ್ತು. ಆದರೆ ಕೊನೆಯಲ್ಲಿ ಶಾರ್ದೂಲ್‌ ಠಾಕೂರ್‌, ಕುಲದೀಪ್‌ ಯಾದವ್‌, ಅವೀಶ್‌ ಖಾನ್‌ ಔಟಾದರೂ ಸ್ಯಾಮ್ಸನ್‌ ಸ್ಫೋಟಕ ಆಟ ಆಡಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಕೊನೆಯ ಓವರ್‌ನಲ್ಲಿ 31 ರನ್‌ ಬೇಕಿತ್ತು. ತಬ್ರೈಜ್ ಶಮ್ಸಿ ಎಸೆದ ಓವರ್‌ನಲ್ಲಿ 1 ಸಿಕ್ಸ್‌, 3 ಬೌಂಡರಿಯನ್ನು ಸ್ಯಾಮ್ಸನ್‌ ಹೊಡೆದರು. ಅಂತಿಮವಾಗಿ ಈ ಓವರ್‌ನಲ್ಲಿ 20 ರನ್‌ ಬಂತು. 38 ಮತ್ತು 39 ಓವರ್‌ನಲ್ಲಿ ಕ್ರಮವಾಗಿ 8 , 7 ರನ್‌ ಬಂದಿತ್ತು. ಈ ಓವರ್‌ ಗಳಲ್ಲಿ ತಂಡ ಹೆಚ್ಚು ರನ್ ಗಳಿಸಿದ್ದರೆ ಈ ಪಂದ್ಯವನ್ನು ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಇದನ್ನೂ ಓದಿ: ಟ್ವೆಂಟಿ-20 ವಿಶ್ವಕಪ್: ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಮಹಮದ್ ಶಮಿ..?: ದ್ರಾವಿಡ್ ಹೇಳಿದ್ದೇನು?ಶಾರ್ದೂಲ್‌ ಠಾಕೂರ್‌ 33 ರನ್‌(31 ಎಸೆತ, 6 ಬೌಂಡರಿ) ಹೊಡೆದು ಔಟಾದರೆ ಸ್ಯಾಮ್ಸನ್‌ ಔಟಾಗದೇ 86 ರನ್‌(63 ಎಸೆತ, 9 ಎಸೆತ, 3 ಸಿಕ್ಸರ್‌) ಹೊಡೆದರು. 38ನೇ ಓವರ್‌ನಲ್ಲಿ ರಬಡಾ ಶಾರ್ದೂಲ್‌ ಠಾಕೂರ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ಔಟ್‌ ಮಾಡಿದ್ದರಿಂದ ಪಂದ್ಯ ದಕ್ಷಿಣ ಆಫ್ರಿಕಾದ ಕಡೆ ವಾಲಿತು.ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು, ರಬಡಾ ಎರಡು ವಿಕೆಟ್‌ ಪಡೆದರು.