ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಕೆಆರ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದ್ದಾರೆ. ಚೆನ್ನೈ: ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದ್ದಾರೆ. ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪರ ಕೀ ಸ್ಪಿನ್ನರ್ ಆಗಿ ವಿಕೆಟ್‌ಗಳನ್ನು ಕಿತ್ತಿದ್ದ ವರುಣ್‌ ಚಕ್ರವರ್ತಿ ಆಸ್ಟ್ರೇಲಿಯಾ ಪ್ರವಾಸದ ಟಿ20 ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.ಆದರೆ, ಗಾಯದಿಂದಾಗಿ ಆಸ್ಟ್ರೇಲಿಯಾ ವಿಮಾನ ಹತ್ತಲಿಲ್ಲ. ಇವರ ಸ್ಥಾನಕ್ಕೆ ತಮ್ಮದೇ ರಾಜ್ಯದವರಾದ ಎಡಗೈ ವೇಗಿ ಟಿ ನಟರಾಜನ್‌ಗೆ ಅವಕಾಶ ನೀಡಲಾಯಿತು. ಅದರಂತೆ ನಟರಾಜನ್‌ ಸಿಕ್ಕ ಅವಕಾಶವನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಂಡರು. ಆ ಮೂಲಕ ತಮ್ಮ ಸ್ಥಾನವನ್ನು ಟೀಂ ಇಂಡಿಯಾದಲ್ಲಿ ಗಟ್ಟಿ ಮಾಡಿಕೊಂಡರು. (@)ಇದೀಗ ವರುಣ್‌ ಚಕ್ರವರ್ತಿ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇತ್ತೀಚೆಗೆ ಅವರು ದೀರ್ಘ ಕಾಲದ ಗೆಳತಿ ನೇಹಾ ಖೇಡೆಕರ್ ಅವರನ್ನು ವಿವಾಹವಾಗಿದ್ದಾರೆ. ಎರಡು ಬಾರಿ ಐಪಿಎಲ್‌ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್ ತಂಡ, ನೂತನ ಜೋಡಿಗೆ ಶುಭ ಹಾರೈಸಿದೆ.