ಕೊರೋನಾ: ತಾಯಿ ಬಳಿಕ ಸೋದರಿಯನ್ನೂ ಕಳೆದುಕೊಂಡ ಟೀಂ ಇಂಡಿಯಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿಯವರ ಸೋದರಿ ವತ್ಸಲಾ ಶಿವಕುಮಾರ್ (42) ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿಯವರ ಸೋದರಿ ವತ್ಸಲಾ ಶಿವಕುಮಾರ್ (42) ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವೇದಾ ಕೃಷ್ಣಮೂರ್ತಿಯವರ ಸೋದರಿ ವತ್ಸಲಾ ಇಂದು ಕೊನೆಯುಸಿರೆಳೆದಿದ್ದಾರೆ.ಇದಕ್ಕೆ ಕೆಲವೇ ದಿನಗಳ ಹಿಂದೆ ವೇದಾ ಅವರ ತಾಯಿ ಚೆಲುವಾಂಬ (63) ಕೊರೋನಾಗೆ ಬಲಿಯಾಗಿದ್ದರು. ಇದೀಗ ಸೋದರಿ ಕೂಡ ಪ್ರಾಣ ಬಿಟ್ಟಿದ್ದು ವೇದಾ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.