ಟ್ವೆಂಟಿ-20 ವಿಶ್ವಕಪ್: ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಮಹಮದ್ ಶಮಿ..?: ದ್ರಾವಿಡ್ ಹೇಳಿದ್ದೇನು? ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿರುವ ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಹಿರಿಯ ವೇಗಿ ಮಹಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಈ ಕುರಿತು ತಂಡದ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಮಾಹಿತಿ ನೀಡಿದ್ದಾರೆ. ಇಂದೋರ್: ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿರುವ ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಹಿರಿಯ ವೇಗಿ ಮಹಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಈ ಕುರಿತು ತಂಡದ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಮಾಹಿತಿ ನೀಡಿದ್ದಾರೆ.ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿರುವಂತೆಯೇ ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ. ಬಿಸಿಸಿಐ ಇನ್ನೂ ಬುಮ್ರಾ ಬದಲಿ ಆಟಗಾರನನ್ನು ಹೆಸರಿಸಿಲ್ಲ ಹಾಗೂ ವೇಗಿ ಸ್ಥಾನವನ್ನು ಯಾರು ತುಂಬಬಹುದು ಎಂಬ ಚರ್ಚೆ ವ್ಯಾಪಕವಾಗಿದೆ. ಟೀಮ್ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ಗಳಿಂದ ಸೋತ ನಂತರ ಸುದ್ದಿಗೋಷ್ಠಿಯಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಬದಲಿಗೆ ಮುಹಮ್ಮದ್ ಶಮಿ ಭಾರತ ತಂಡವನ್ನು ಸೇರಲಿದ್ದಾರೆಯೇ? ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಕೇಳಲಾಯಿತು.ಇದನ್ನೂ ಓದಿ: 3ನೇ ಟಿ20: ಮತ್ತೊಮ್ಮೆ ಡಕೌಟ್, ಹೀನಾಯ ದಾಖಲೆ ಬರೆದ ರೋಹಿತ್ ಶರ್ಮಾ“ಬುಮ್ರಾಗೆ ಬದಲಿ ಯಾರು ಎಂಬ ವಿಷಯದಲ್ಲಿನಾವು ಕಾದು ನೋಡೋಣ. ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ. ಆದ್ದರಿಂದ ಶಮಿ ನಿಸ್ಸಂಶಯವಾಗಿ ಮೀಸಲು ಆಟಗಾರರಾಗಿ ನಮ್ಮೊಂದಿಗಿರುತ್ತಾರೆ. ಅವರಿಗೆ ಈ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈ ಸಮಯದಲ್ಲಿ ಎನ್‌ಸಿಎಯಲ್ಲಿದ್ದರು. ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ 14-15 ದಿನಗಳ ಕೋವಿಡ್ ನಂತರ ಅವರ ಸ್ಥಿತಿ ಏನು ಎಂಬುದರ ಕುರಿತು ನಾವು ವರದಿಗಳನ್ನು ಪಡೆಯಬೇಕಾಗಿದೆ. ವರದಿ ಬಂದ ಬಳಿಕ ಆಯ್ಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ದ್ರಾವಿಡ್ ಹೇಳಿದರು.