ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ಆಸಿಸ್ ನಾಯಕ: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಮೊದಲ ಆಟಗಾರ ಪ್ಯಾಟ್ ಕಮಿನ್ಸ್ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಟಗಾರನೋರ್ವ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ. ದುಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಟಗಾರನೋರ್ವ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ.ಹೌದು.. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ‌‌ ಬೆಂಗಳೂರು ಮತ್ತು ಹೈದರಾಬಾದ್‌ ತೀವ್ರ ಪೈಪೋಟಿಯಲ್ಲಿ ಕಡೆಗೂ ಹೈದರಾಬಾದ್‌ ತಂಡ ಪ್ಯಾಟ್‌ ಕಮ್ಮಿನ್ಸ್ ರನ್ನು ಐಪಿಎಲ್‌ ಇತಿಹಾಸದಲ್ಲಿಯೇ 20.50 ಕೋಟಿ ರೂ. ದುಬಾರಿ ಮೊತ್ತಕ್ಕೆ ಖರೀದಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿ ಇಂತಿದೆ.ಐಪಿಎಲ್ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ನ ರಾಜಸ್ಥಾನ ರಾಯಲ್ಸ್ ತಂಡದ ಪಾಲಾದರು. 7.4 ಕೋಟಿ ರೂಗೆ ರಾಜಸ್ಥಾನ ರಾಯಲ್ಸ್ ತಂಡ ರೋಮನ್ ಪಾವೆಲ್ ರನ್ನು ಖರೀದಿಸಿದೆ. ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ 4 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರಾಟವಾದರು. ಆಸ್ಟ್ರೇಲಿಯಾದ ಮತ್ತೋರ್ವ ಬ್ಯಾಟರ್ ಟ್ರಾವಿಸ್ ಹೆಡ್ 6.8 ಕೋಟಿ ರೂಗೆ ಸನ್ ರೈಸರ್ಸ್ ತಂಡದ ಪಾಲಾಗಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.80 ಕೋಟಿ ರೂ.ಗೆ ಖರೀದಿಸಿದೆ.ಇದನ್ನೂ ಓದಿ: ಸತತ 10 ಪಂದ್ಯಗಳ ಗೆಲುವು: ನಾಯಕತ್ವದಲ್ಲಿ ಧೋನಿ ದಾಖಲೆ ಹಿಂದಿಕ್ಕಿದ ಕೆಎಲ್ ರಾಹುಲ್!ಶ್ರೀಲಂಕಾದ ವನಿಂದು ಹಸರಂಗ 1.5 ಕೋಟಿ ರೂಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪಾಲಾಗಿದ್ದಾರೆ. ಭಾರತದ ಶಾರ್ದೂಲ್ ಠಾಕೂರ್ ( )4 ಕೋಟಿ ರೂಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಿ ( ) 50 ಲಕ್ಷ ರೂಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ. ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಯೆಟ್ಜಿ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ನ್ಯೂಜಿಲೆಂಡ್ ಆಲ್ರೌಂಡರ್ 14 ಕೋಟಿ ರೂಗಳಿಗೆ ಚೆನ್ನೈ ಸೂಪರ್ ಕಿಂಗ ತಂಡಕ್ಕೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ಪಾಂಡ್ಯ ಕ್ಯಾಪ್ಟನ್: ಘೋಷಿಸಿದ 1 ಗಂಟೆಯಲ್ಲೇ 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಫ್ರಾಂಚೈಸಿ!ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಕ್ರಿಸ್ ವೋಕ್ಸ್ 4.2 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.