ಭ್ರಷ್ಟಾಚಾರ ತಡೆ ಪುನಶ್ಚೇತನಕ್ಕಾಗಿ 4.5 ಮಿಲಿಯನ್ ರೂಪಾಯಿ ಭಾರಿ ಮೊತ್ತದ ದಂಡ ತೆತ್ತ ಉಮರ್ ಅಕ್ಮಲ್! ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬರೋಬ್ಬರಿ 45 ಲಕ್ಷ ರೂಪಾಯಿ ದಂಡವನ್ನು ಕಟ್ಟಿದ್ದಾರೆ. ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬರೋಬ್ಬರಿ 45 ಲಕ್ಷ ರೂಪಾಯಿ ದಂಡವನ್ನು ಕಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ 45 ಲಕ್ಷ ರುಪಾಯಿಯನ್ನು ಉಮರ್ ಅಕ್ಮಲ್ ದಂಡ ಕಟ್ಟಿದ್ದು ಇದೀಗ ಭ್ರಷ್ಟಾಚಾರ ನಿಗ್ರಹ ಘಟಕದ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಭಷ್ಟಾಚಾರ ತಡೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಉಮರ್ ಅಕ್ಮಲ್ ಅವರಿಗೆ 2020ರ ಫೆಬ್ರವರಿಯಿಂದ ಕ್ರಿಕೆಟ್ ಆಡದಂತೆ ನಿಷೇದ ಹೇರಲಾಗಿತ್ತು.