3rd T20I: 95 ಮೀಟರ್ ದೂರದ ಭಾರಿ ಸಿಕ್ಸರ್; ಡ್ರೆಸ್ಸಿಂಗ್ ರೂಮ್ ನಿಂದಲೇ ಸೆಲ್ಯೂಟ್ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ! ನ್ಯೂಜಿಲೆಂಡ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಅದ್ಭುತ ಆಲ್ ರೌಂಡ್ ಆಟವಾಡಿದ ದೀಪಕ್ ಚಹರ್ ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್ ನಿಂದಲೇ ಸೆಲ್ಯೂಟ್ ಮಾಡುವ ಮೂಲಕ ಗೌರವ ಸೂಚಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕೊಲ್ಕತಾ: ನ್ಯೂಜಿಲೆಂಡ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಅದ್ಭುತ ಆಲ್ ರೌಂಡ್ ಆಟವಾಡಿದ ದೀಪಕ್ ಚಹರ್ ( ) ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ( ) ಡ್ರೆಸ್ಸಿಂಗ್ ರೂಮ್ ನಿಂದಲೇ ಸೆಲ್ಯೂಟ್ ಮಾಡುವ ಮೂಲಕ ಗೌರವ ಸೂಚಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.../fwckFcqHrZಹೌದು.. ಈಡನ್ ಗಾರ್ಡನ್ ( ) ಮೈದಾನದಲ್ಲಿ ನಿನ್ನೆ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಅನ್ನು ಭಾರತ ಸೋಲಿಸಿದೆ. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡುವ ಮೂಲಕ ಐಸಿಸಿ ಟಿ-20 ವರ್ಲ್ಡ್ ಕಪ್ ( T20WC) ನಲ್ಲಿನ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿದೆ. ಇದನ್ನೂ ಓದಿ: ಟಿ20 ಸರಣಿ: ನ್ಯೂಜಿಲ್ಯಾಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಟೀಂ ಇಂಡಿಯಾಇನ್ನು ಈ ಪಂದ್ಯದಲ್ಲಿ ಸಿಡಿಲಬ್ಬರದ ಹೊಡೆತಗಳಿಂದ ದೀಪಕ್ ಚಹರ್ ಪಂದ್ಯದಲ್ಲಿ ಮಿಂಚಿದರು. ಆಡಮ್ ಮಿಲ್ನೆ ಓವರ್ ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಚಹರ್ 21 ರನ್ ಬಾರಿಸಿದರು. ಇದೇ ಓವರ್ ನ 4ನೇ ಎಸೆತದಲ್ಲಿ ದೀಪಕ್ 95 ಮೀಟರ್ ಗಳ ದೂರದ ಭಾರಿ ಸಿಕ್ಸರ್ ಹೊಡೆದಾಗ ಡ್ರೆಸ್ಸಿಂಗ್ ರೂಮ್ ನಲ್ಲಿನ ಆಟಗಾರರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಒಂದು ಹೆಜ್ಜೆ ಮುಂದಿಟ್ಟ ಹಿಟ್ ಮ್ಯಾನ್ ರೋಹಿತ್ ಶರ್ಮಾ, ದೀಪಕ್ ಚಹರ್ ಹೊಡೆತಕ್ಕೆ ಸೆಲ್ಯೂಟ್ ಹೊಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: 3ನೇ ಟಿ20: ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್; 184 ರನ್ ಪೇರಿಸಿದ ಭಾರತಇನ್ನು ಈ ಮೂರು ಪಂದ್ಯಗಳ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ 3-0 ಅಂತರದಿಂದ ಬ್ಲ್ಯೂ ಬಾಯ್ಸ್ ಗೆದ್ದುಕೊಂಡಿದ್ದಾರೆ. ಟಿ20 ಸರಣಿ: ನ್ಯೂಜಿಲ್ಯಾಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಟೀಂ ಇಂಡಿಯಾ3ನೇ ಟಿ20: ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್; 184 ರನ್ ಪೇರಿಸಿದ ಭಾರತ