ಐಪಿಎಲ್ 2023: ಕೊಹ್ಲಿ, ಡುಪ್ಲೆಸಿಸ್ ಅರ್ಧಶತಕ; ಪಂಜಾಬ್ ಗೆ ಗೆಲ್ಲಲು 175 ರನ್ ಗುರಿ ನೀಡಿದ ಆರ್ ಸಿಬಿ ಆರಂಭಿಕರಾದ ಫಾಫ್ ಡು ಪ್ಲೆಸಿಸ್ (84) ಮತ್ತು ವಿರಾಟ್ ಕೊಹ್ಲಿ (59) ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 175 ರನ್ ಗಳ ಗುರಿಯನ್ನು ನೀಡಿದೆ. ಪಂಜಾಬ್: ಆರಂಭಿಕರಾದ ಫಾಫ್ ಡು ಪ್ಲೆಸಿಸ್ (84) ಮತ್ತು ವಿರಾಟ್ ಕೊಹ್ಲಿ (59) ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 175 ರನ್ ಗಳ ಗುರಿಯನ್ನು ನೀಡಿದೆ.ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಆರಂಭಿಸಿತ್ತು. ಡು ಪ್ಲೆಸಿಸ್ ಮತ್ತು ಕೊಹ್ಲಿ ಆರ್‌ಸಿಬಿಗೆ ಸ್ಫೋಟಕ ಆರಂಭ ನೀಡಿದರು. ಆದರೆ ಇನ್ನಿಂಗ್ಸ್ ಮುಂದುವರೆದಂತೆ, ಆರ್‌ಸಿಬಿಯ ರನ್ ವೇಗವು ನಿಧಾನವಾಯಿತು. ಅಂತಿಮವಾಗಿ 4 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿದೆ. ಪಂಜಾಬ್ ಪರ ಹರ್ ಪ್ರೀತ್ ಬ್ರಾರ್ 2 ವಿಕೆಟ್, ಹರ್ಷ್ ದೀಪ್ ಸಿಂಗ್ ಮತ್ತು ನಾಥನ್ ಇಲ್ಲಿಸ್ ತಲಾ 1 ವಿಕೆಟ್ ಪಡೆದಿದ್ದಾರೆ.