ಐಪಿಎಲ್ ಇತಿಹಾಸದಲ್ಲೇ ಅಪರೂಪದ 3 ದಾಖಲೆ ಬರೆದ ಗುಜರಾತ್ ಟೈಟನ್ಸ್ ನ ಸಾಯಿ ಸುದರ್ಶನ್! ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ 3 ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ 3 ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಕಲೆಹಾಕಿ ಅಬ್ಬರಿಸಿ ಶತಕ ವಂಚಿತರಾದರು. ಆದರೆ ಶತಕ ವಂಚಿತರಾದರೂ ಸಾಯಿ ಸುದರ್ಶನ್ ಈ ಪಂದ್ಯದ ಮೂಲಕ ಮೂರು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.ಇದನ್ನೂ ಓದಿ: ಐಪಿಎಲ್ 2023 ಫೈನಲ್: ಶತಕದಂಚಿನಲ್ಲಿ ಮುಗ್ಗರಿಸಿದ ಸಾಯಿ ಸುದರ್ಶನ್, ಚೆನ್ನೈ ತಂಡಕ್ಕೆ ಗೆಲ್ಲಲು 215 ರನ್ ಬೃಹತ್ ಗುರಿಐಪಿಎಲ್ ಫೈನಲ್ ನಲ್ಲಿ 3ನೇ ಗರಿಷ್ಠ ವೈಯುಕ್ತಿಕ ರನ್ ದಾಖಲೆ ಈ ಪಂದ್ಯದಲ್ಲಿ 96 ರನ್ ಗಳಿಸಿದ ಸಾಯಿ ಸುದರ್ಶನ್ ಆ ಮೂಲಕ ಐಪಿಎಲ್ ಫೈನಲ್ ನಲ್ಲಿ 3ನೇ ಗರಿಷ್ಠ ವೈಯುಕ್ತಿಕ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ಪಟ್ಟಿಯಲ್ಲಿ 2018ರಲ್ಲಿ ಮುಂಬೈ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಅಜೇಯ 117ರನ್ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ಫೈನಲ್ ಪಂದ್ಯದ ಆಟಗಾರನೊಬ್ಬನ ವೈಯುಕ್ತಿಕ ಗರಿಷ್ಠ ರನ್ ದಾಖಲೆಯಾಗಿದೆ. 117* - () , , 2018 115* - () , , 2014 96 - () , , 2023 95 - () , , 2011 94 - () , , 2014ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ದಾಖಲೆ ಬರೆದ ಗುಜರಾತ್ ಟೈಟನ್ಸ್ಅನ್ ಕ್ಯಾಪ್ಡ್ ಆಟಗಾರನ 2ನೇ ಗರಿಷ್ಠ ರನ್ ಇನ್ನು 2022ರಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಹಾಲಿ ಟೂರ್ನಿಯಲ್ಲಿ ಅನ್ ಕ್ಯಾಪ್ಡ್ ಆಟಗಾರರಾಗಿದ್ದರು. ಆದರೆ ಇಂದು ಫೈನಲ್ ಪಂದ್ಯದಲ್ಲಿ ಗುಜರಾತ್ ಪರ ಕಣಕ್ಕಿಳಿದು ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ 2ನೇ ಗರಿಷ್ಟ ವೈಯುಕ್ತಿಕ ರನ್ ದಾಖಲಿಸಿದ ಅನ್ ಕ್ಯಾಪ್ಡ್ ಆಟಗಾರ ಎಂಬ ಕೀರ್ತಿಗೆ ಸಾಯಿ ಸುದರ್ಶನ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 2022ರ ಎಲಿಮಿನೇಟರ್ ಹಂತದ ಪಂದ್ಯದಲ್ಲಿ ಆರ್ ಸಿಬಿಯ ರಜತ್ ಪಾಟಿದಾರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ 112ರನ್ ಸಿಡಿಸಿದ್ದರು. ಈ ಮೂಲಕ ರಜತ್ ಪಾಟಿದಾರ್ ಐಪಿಎಲ್ ಇತಿಹಾಸದ ಗರಿಷ್ಟ ವೈಯುಕ್ತಿಕ ರನ್ ದಾಖಲಿಸಿದ ಅನ್ ಕ್ಯಾಪ್ಡ್ ಆಟಗಾರರಾಗಿದ್ದಾರೆ. 112* - () , , 2022 96 - () , , 2023 94 - () , , 2014 89 - () , , 2012 Finalಇದನ್ನೂ ಓದಿ: ಐಪಿಎಲ್ 2023 ಫೈನಲ್: ಬಿಗ್‌ ಸ್ಕ್ರೀನ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌, ಅಭಿಮಾನಿಗಳ ಆಕ್ರೋಶ!ಐಪಿಎಲ್ ಫೈನಲ್ ನಲ್ಲಿ 50+ ರನ್ ಗಳಿಸಿದ ಕಿರಿಯ ಆಟಗಾರ ಅಂತೆಯೇ ಇದೇ ಪಂದ್ಯದ ಅದ್ಭುತ ಬ್ಯಾಟಿಂಗ್ ಮೂಲಕ ಸಾಯಿ ಸುದರ್ಶನ್ ಮೂರನೇ ದಾಖಲೆ ನಿರ್ಮಿಸಿದ್ದು, ಐಪಿಎಲ್ ಫೈನಲ್ ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇಂದಿನ ಬ್ಯಾಟಿಂಗ್ ಹೊತ್ತಿಗೆ ಸಾಯಿ ಸುದರ್ಶನ್ ಅವರ ವಯಸ್ಸು 21 ವರ್ಷ 226 ದಿನಗಳಾಗಿವೆ. ಈ ಪಟ್ಟಿಯಲ್ಲಿ ಪಂಜಾಬ್ ತಂಡದ ಮನನ್ ವೋಹ್ರಾ ಇದ್ದು ಅವರು (20 ವರ್ಷ 318 ದಿನ) 2014ರಲ್ಲಿ ಕೆಕೆಆರ್ ವಿರುದ್ಧದ ಫೈನಲ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದರು. 50- 20y, 318 - () , , 2014 21y, 226 - () , , 2023 22y, 37 - () , , 2021 23y, 37 - () , , 2020