ಏಷ್ಯಾ ಕಪ್ 2023: ಶ್ರೀಲಂಕಾ ವಿರುದ್ಧ ಅಹ್ಮದ್-ರಿಜ್ವಾನ್ ಅಮೋಘ ಜೊತೆಯಾಟ, 15 ವರ್ಷಗಳ ಹಳೆಯ ದಾಖಲೆ ಪತನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಭಾರತ ತಂಡ ಫೈನಲ್ ಗೇರಿದ್ದು, ಫೈನಲ್ ಗೇರುವ ಪೈಪೋಟಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ. ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಭಾರತ ತಂಡ ಫೈನಲ್ ಗೇರಿದ್ದು, ಫೈನಲ್ ಗೇರುವ ಪೈಪೋಟಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ.ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ 42 ಓವರ್ ಗಳಿಗೆ ಸೀಮಿತವಾದ ಸೂಪರ್ 4 ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 130 ರನ್ ಗಳಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಗೂಡಿದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ಅಮೋಘ ಬ್ಯಾಟಿಂಗ್ ಮೂಲಕ ದಾಖಲೆಯ ಜೊತೆಯಾಟವಾಡಿದರು. ಈ ಜೋಡಿ ಶತಕದ ಜೊತೆಯಾಟವಾಡಿ ಪಾಕಿಸ್ತಾನ ತಂಡ ಸವಾಲಿನ ಗುರಿ ತಲುಪುವಂತೆ ಮಾಡಿದರು. ಇದನ್ನೂ ಓದಿ: ಏಷ್ಯಾ ಕಪ್ 2023: ಪಾಕಿಸ್ತಾನ ವಿರುದ್ದ ಶ್ರೀಲಂಕಾಗೆ ವಿರೋಚಿತ ಜಯ, ಫೈನಲ್ ಗೆ ಲಗ್ಗೆಮಹಮದ್ ರಿಜ್ವಾನ್ 73 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 86 ರನ್ ಗಳನ್ನು ಕಲೆಹಾಕಿದರೆ, ಉತ್ತಮ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 47ರನ್ ಗಳಿಸಿದರು. ಈ ಜೋಡಿ 6ನೇ ವಿಕೆಟ್ ಗೆ 108 ರನ್ ಕಲೆಹಾಕಿದ್ದು, ಇದು ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಪಾಕಿಸ್ತಾನ ಪರ 6 ಮತ್ತು ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಇದಕ್ಕೂ ಮೊದಲು 2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಪಾಕಿಸ್ತಾನದ ಫವಾದ್ ಆಲಾಮ್ ಮತ್ತು ಸೊಹೆಲ್ ತನ್ವೀರ್ ಜೋಡಿ 100 ರನ್ ಗಳ ಜೊತೆಯಾಟವಾಡಿತ್ತು. ಇದು ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪರ ದಾಖಲಾದ ಗರಿಷ್ಟ ರನ್ ಗಳ ಜೊತೆಯಾಟವಾಗಿತ್ತು.ಇದನ್ನೂ ಓದಿ: 'ಭಾರತ ಮ್ಯಾಚ್ ಫಿಕ್ಸ್ ಮಾಡಿದೆ...', ಆಕ್ರೋಶಗೊಂಡ ಶೋಯೆಬ್ ಅಖ್ತರ್ ಹೇಳಿದ್ದೇನು? ವಿಡಿಯೋ ವೈರಲ್ಈ ದಾಖಲೆಯನ್ನು ಇದೀಗ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ಜೋಡಿ ಮುರಿದಿದೆ. 6th : 108 - & , , 2023* 100 - & , , 2008 81 - -- & , , 1995 71 - & -- , , 2018