2024: ದೆಹಲಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ ಗೆಲುವು ಜೈಪುರದಲ್ಲಿ ನಡೆದ ಐಪಿಎಲ್ 2024 ರ 9 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ದೆಹಲಿ ತಂಡವನ್ನು 12 ರನ್ ಗಳಿಂದ ಮಣಿಸಿದೆ. ಜೈಪುರ: ಜೈಪುರದಲ್ಲಿ ನಡೆದ ಐಪಿಎಲ್ 2024 ರ 9 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ದೆಹಲಿ ತಂಡವನ್ನು 12 ರನ್ ಗಳಿಂದ ಮಣಿಸಿದೆ. ಟಾಸ್ ಗೆದ್ದ ದೆಹಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಗೆ ಕಟ್ಟಿ ಹಾಕಿತು.ಚೇಸಿಂಗ್ ನಲ್ಲಿ ಎಡವಿಡ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 173 ರನ್ ಗಳನ್ನಷ್ಟೇ ಗಳಿಸುವುದಕ್ಕೆ ಸಾಧ್ಯವಾಯಿತು. ವಾರ್ನರ್ ಮತ್ತು ಮಾರ್ಷ್ ಅವರ ಉತ್ತಮ ಆರಂಭಿಕ ಆಟದ ಹೊರತಾಗಿಯೂ ದೆಹಲಿ ತಂಡ ಚೇಸಿಂಗ್ ನಲ್ಲಿ ಎಡವಿತ್ತು.ಈ ಜೋಡಿಯ ಜೊತೆಯಾಟ ಮುರಿದ ನಂತರ ಸ್ಟಬ್ಸ್ ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ಹೋರಾಟ ನಡೆಸಿದರಾದರೂ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದ ಪರಿಣಾಮ ಏಕಾಂಗಿ ಹೋರಾಟವಾಯಿತು.