ಪಾಕ್ ವಿರುದ್ಧ ಮೊದಲ ಟೆಸ್ಟ್: ಮೊದಲ ದಿನವೇ 500ಕ್ಕೂ ಅಧಿಕ ರನ್, 112 ವರ್ಷಗಳ ದಾಖಲೆ ಮುರಿದ ಇಂಗ್ಲೆಂಡ್, ಜಗತ್ತಿನ ಮೊದಲ ತಂಡ! ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದು, ಮೊದಲ ದಿನವೇ 500ಕ್ಕೂ ಅಧಿಕ ರನ್ ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದ 112 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ದಿನವೇ 500ರನ್ ಗಳಿಸಿದ ಜಗತ್ತಿನ ಮೊದಲ ದೇಶ ಎಂಬ ಕೀರ್ತಿಗೂ ಇಂಗ್ಲೆಂಡ್ ಭಾಜನವಾಗಿದೆ. ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದು, ಮೊದಲ ದಿನವೇ 500ಕ್ಕೂ ಅಧಿಕ ರನ್ ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದ 112 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ದಿನವೇ 500ರನ್ ಗಳಿಸಿದ ಜಗತ್ತಿನ ಮೊದಲ ದೇಶ ಎಂಬ ಕೀರ್ತಿಗೂ ಇಂಗ್ಲೆಂಡ್ ಭಾಜನವಾಗಿದೆ.ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನವೇ 506 ರನ್ ದಾಖಲಿಸುವ ಮೂಲಕ 112 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದೆ. ಒಂದೇ ದಿನದಲ್ಲಿ ಯಾವುದೇ ತಂಡ ಇಷ್ಟು ರನ್ ಬಾರಿಸಿದ ಇತಿಹಾಸವೇ ಇಲ್ಲ. 1910 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಒಂದೇ ದಿನದಲ್ಲಿ 494 ರನ್ ಗಳಿಸಿದ್ದೇ ಈವರೆಗಿನ ದಾಖಲೆಯಾಗಿತ್ತು.ಇದನ್ನೂ ಓದಿ: ಆಯ್ಕೆ ಸಮಿತಿ ವಜಾ ಹಿನ್ನಲೆ: ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿದ ಬಿಸಿಸಿಐ!ರಾವಲ್ಪಿಂಡಿ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಟೆಸ್ಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ ಆಟಗಾರರು 4 ಶತಕ ಬಾರಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 506 ರನ್ ಗಳಿಸಿದೆ. ಮಂದ ಬೆಳಕಿನ ಕಾರಣ ಇನ್ನೂ 15 ಓವರ್ ಬಾಕಿ ಇರುವಾಗಲೇ ಆಟ ಮುಕ್ತಾಯಗೊಳಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಇಂಗ್ಲೆಂಡ್ ಇತಿಹಾಸ ನಿರ್ಮಿಸಿತ್ತು. !?