ಐಪಿಎಲ್ 2020: ತನ್ನ ಎಂಆರ್ ಎಫ್ ಬ್ಯಾಟ್‌ಗೆ ಅಂತಿಮ ಆಕಾರ ಕೊಟ್ಟ ವಿರಾಟ್ ಕೊಹ್ಲಿ, ವಿಡಿಯೋ! ಐಪಿಎಲ್ 2020 ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದ್ದು ಅದಕ್ಕಾಗಿ ಎಲ್ಲಾ ತಂಡಗಳು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. ದುಬೈ: ಐಪಿಎಲ್ 2020 ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದ್ದು ಅದಕ್ಕಾಗಿ ಎಲ್ಲಾ ತಂಡಗಳು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಕ್ರಿಕೆಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ವಿರಾಟ್ ಕೊಹ್ಲಿ ಇದೀಗ ತಮ್ಮ ಬ್ಯಾಟ್ ಗೆ ಅಂತಿಮ ಆಕಾರ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಟೂರ್ನಿ ಆರಂಭವಾಗುತ್ತಿದೆ. ಇನ್ನು ಬೆಂಗಳೂರು ತಂಡ ಸೆಪ್ಟೆಂಬರ್ 21ರಂದು ಮೊದಲ ಪಂದ್ಯವನ್ನಾಡಲಿದೆ.' . . (@.) 11, 2020 2:07am