1960 ರ ದಶಕದ ಸ್ಟಾರ್ ಕ್ರಿಕೆಟಿಗ ಸಲೀಂ ದುರಾನಿ ನಿಧನ 1960ರ ದಶಕದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ನವದೆಹಲಿ: 1960ರ ದಶಕದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.ದುರಾನಿ ಅವರು ದೀರ್ಘಕಾಲಿನ ಕಾಯಿಲೆಯಿಂದ ಇಂದು ಬೆಳಗ್ಗೆ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಆಲ್ರೌಂಡರ್ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. 1934ರ ಡಿಸೆಂಬರ್ 11ರಂದು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಜನಿಸಿದ್ದ ಸಲೀಂ ದುರಾನಿ, ಈಗ ಗುಜರಾತ್ನ ಜಮ್ನಾಗರ್ದಲ್ಲಿ ತಮ್ಮ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ವಾಸವಾಗಿದ್ದರು. ಈ ವರ್ಷದ ಜನವರಿಯಲ್ಲಿ ಕುಸಿದು ಬಿದ್ದು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಪ್ರಾಕ್ಸಿಮಲ್ ತೊಡೆ ಎಲುಬಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: 2023: ಮೈಯರ್ಸ್ ಸ್ಫೋಟಕ ಅರ್ಧಶತಕ; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಲಖನೌ ಸೂಪರ್ ಜೈಂಟ್ಸ್!ಕಾಬೂಲ್ ಮೂಲದ ದುರಾನಿ ಭಾರತ ತಂಡದಲ್ಲಿ ಬ್ಯಾಟ್ ಮತ್ತು ಬೌಲಿಂಗ್ನಿಂದಲೇ ಖ್ಯಾತಿ ಗಳಿಸಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆಸ್ಟ್ ಸರಣಿಯ ಐತಿಹಾಸಿಕ ಗೆಲುವಿನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಸಲೀಂ ಕ್ರಮವಾಗಿ 8 ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದರು. ಇದು ಭಾರತ 2-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು ಕಾರಣವಾಗಿತ್ತು. , . ’ . , . . . .ದೇಶದ ಪರವಾಗಿ ಆಡಿದ 50 ಇನ್ನಿಂಗ್ಸ್‌ ಪೈಕಿ 7 ಅರ್ಧಶತಕ, ಒಂದು ಶತಕ ಬಾರಿಸಿರುವ ಸಲೀಂ ದುರಾನಿ 1,202 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯದ ಒಂದು ದಶಕದ ನಂತರ, ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸಿದ್ದರು. ಅಂದಿನ ದೈತ್ಯ ದಂತಕಥೆಗಳಾದ ಕ್ಲೈವ್ ಲಾಯ್ಡ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ ಇಬ್ಬರನ್ನೂ ಪಂದ್ಯದಲ್ಲಿ ಔಟ್ ಮಾಡಿದ್ದರು. ಇದಲ್ಲದೇ, ಸಲೀಂ ಅವರು ಉತ್ತಮ ಡ್ರೆಸ್ಸಿಂಗ್ ಶೈಲಿ ಮತ್ತು ಭಂಗಿಗೆ ಹೆಸರುವಾಸಿಯಾದ್ದರು. ಇದನ್ನೂ ಓದಿ: 2023: ಪಂದ್ಯಕ್ಕೆ ಮಳೆ ಅಡ್ಡಿ; ಡಕ್ವರ್ತ್ ಲೂಯಿಸ್ ಪ್ರಕಾರ ವಿರುದ್ಧ 7 ರನ್ ನಿಂದ ಗೆದ್ದ ಪಂಜಾಬ್ ಕಿಂಗ್ಸ್!ಸಲೀಂ ದುರಾನಿ ಅವರು 1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1960ರಲ್ಲಿ. 1961-62ರಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲಿ ಹಿರೋ ಆಗಿ ಹೊರಹೊಮ್ಮಿದ್ದರು. ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ 10 ವಿಕೆಟ್ ಪಡೆದಿದ್ದರು. ಭಾರತ ಭರ್ಜರಿಯಾಗಿ ಗೆದ್ದಿತ್ತು. ಅದಾಗಿ ದಶಕಗಳ ನಂತರ ಸ್ಪೇನ್ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಭಾರತ ಮೊದಲ ಬಾರಿಗೆ ಗೆಲುವು ಸಾಧಿಸುವಲ್ಲಿ ದುರಾನಿ ಪಾತ್ರ ದೊಡ್ಡದಿತ್ತು. ಇವರೊಬ್ಬ ಸ್ಟಾರ್ ಕ್ರಿಕೆಟರ್ ಎನ್ನಿಸಿಕೊಂಡಿದ್ದರು. 1973 ರಲ್ಲಿ ಬಾಲಿವುಡ್ನ ಚರಿತ್ರಾ ಸಿನಿಮಾದಲ್ಲಿ ಹೆಸರಾಂತ ನಟ ಪ್ರವೀಣ್ ಬಾಬಿ ಜೊತೆ ನಟಿಸಿದ್ದರು. ಈ ಮೂಲಕ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದರು. . . . . .ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಸಲೀಂ ದುರಾನಿಯವರು ಮೊದಲಿನಿಂದಲೂ ಗುಜರಾತ್ ಜತೆಗೆ ಗಟ್ಟಿಯಾದ ಒಡನಾಟ ಹೊಂದಿದ್ದರು. ಅವರು ಗುಜರಾತ್ ಮತ್ತು ಸೌರಾಷ್ಟ್ರ ಪರ ಆಟವಾಡಿದ್ದರು. ಬಳಿಕ ಗುಜರಾತ್ನಲ್ಲೇ ನೆಲೆಸಿದ್ದರು. ನನಗೂ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬಹುಮುಖ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಅಗಲುವಿಕೆ ಕಾಡುತ್ತದೆ. ಸಲೀಂ ದುರಾನಿ ಜೀ ಅವರು ಕ್ರಿಕೆಟ್ನ ದಂತಕಥೆ. ಅವರೇ ಒಬ್ಬ ಇನ್ಸ್ಟಿಟ್ಯೂಶನ್ ಆಗಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇನ್ನು ಕ್ರಿಕೆಟ್ ಫೀಲ್ಡ್ನಲ್ಲಿ ಇರಬಹುದು, ಆಚೆಗೆ ಇರಬಹುದು ತಮ್ಮದೇ ಆದ ಒಂದು ಸ್ಟೈಲ್ ಹೊಂದಿದ್ದರು. ಅವರ ಸಾವು ನೋವು ತಂದಿದೆ. ಸಲೀಂ ದುರಾನಿ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.