ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿ: ಜಡೇಜಾ ಮಾರಕ ಬೌಲಿಂಗ್, 177 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್! ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಮಾರಕ ಬೌಲಿಂಗ್ ಗೆ ಆಸ್ಟ್ರೇಲಿಯಾ ತತ್ತರಿಸಿದ್ದು 177 ರನ್ ಗಳಿಗೆ ಆಲೌಟ್ ಆಗಿದೆ. ನಾಗ್ಪುರ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಮಾರಕ ಬೌಲಿಂಗ್ ಗೆ ಆಸ್ಟ್ರೇಲಿಯಾ ತತ್ತರಿಸಿದ್ದು 177 ರನ್ ಗಳಿಗೆ ಆಲೌಟ್ ಆಗಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 177 ರನ್ ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 1, ಉಸ್ಮಾನ್ ಖವಾಜಾ 1, ಮಾರ್ನಸ್ ಲ್ಯಾಬುಸ್ಚಾಗ್ನೆ 49, ಸ್ಟೀವ್ ಸ್ಮೀತ್ 37, ಪೀಟರ್ ಹ್ಯಾಂಡ್ಸ್ಕಾಂಬ್ 31, ಅಲೆಕ್ಸ್ ಕ್ಯಾರಿ 36 ರನ್ ಬಾರಿಸಿದ್ದಾರೆ.ಇದನ್ನೂ ಓದಿ: ಭಾರತದ ಸರಣಿಗೂ ಮುನ್ನವೇ ಆಸ್ಟ್ರೇಲಿಯಾಗೆ ಡಬಲ್ ಆಘಾತ: ಸ್ಟಾರ್ಕ್ ಬಳಿಕ ಮತ್ತೊಬ್ಬ ಸ್ಟಾರ್ ವೇಗಿ ಟೆಸ್ಟ್‌ನಿಂದ ಹೊರಕ್ಕೆಭಾರತದ ಪರ ರವೀಂದ್ರ ಜಡೇಜಾ 5, ಆರ್ ಅಶ್ವಿನ್ 3, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯ ಫೆಬ್ರವರಿ 17ರಿಂದ ದೆಹಲಿಯಲ್ಲಿ ನಡೆಯಲಿದೆ.