T20 : ಮಳೆಯಿಂದಾಗಿ ಇಂಗ್ಲೆಂಡ್-ಸ್ಕಾಟ್ ಲ್ಯಾಂಡ್ ಪಂದ್ಯ ರದ್ದು ಮಂಗಳವಾರ (ಜೂ.04) ಕೆನ್ಸಿಂಗ್ ಟನ್ ಓವಲ್ ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್-ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡಿತು. ಕೆನ್ಸಿಂಗ್ ಟನ್: ಮಂಗಳವಾರ (ಜೂ.04) ಕೆನ್ಸಿಂಗ್ ಟನ್ ಓವಲ್ ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್-ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡಿತು.ಎರಡೂ ತಂಡಗಳಿಗೆ ತಲಾ 1 ಅಂಕ ನೀಡಲಾಗಿದೆ. ಆರಂಭದಲ್ಲಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ತಲಾ 10 ಓವರ್ ಗಳಿಗೆ ಇಳಿಕೆ ಮಾಡಲಾಗಿತ್ತು. ಈ ವೇಳೆಗೆ ಸ್ಕಾಟ್ ಲ್ಯಾಂಡ್ ವಿಕೆಟ್ ನಷ್ಟವಿಲ್ಲದೇ 90 ರನ್ ಗಳಿಸಿತ್ತು.ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ ಇಂಗ್ಲೆಂಡ್ ಗೆ 10 ಓವರ್ ಗಳಲ್ಲಿ 109 ರನ್ ಗಳ ಗುರಿ ನೀಡಲಾಯಿತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆಗೆ ಮಳೆ ತೀವ್ರಗೊಂಡ ಪರಿಣಾಮ ಎರಡೂ ತಂಡಗಳಿಗೆ ತಲಾ 1 ರನ್ ನೀಡಲಾಯಿತು.ಸ್ಕಾಟ್ ಲ್ಯಾಂಡ್ ಮುಂದಿನ ಪಂದ್ಯದಲ್ಲಿ ನಮೀಬಿಯಾವನ್ನು ಇದೇ ಮೈದಾನದಲ್ಲಿ ಎದುರಿಸಲಿದ್ದರೆ, ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ.