ಚೆನ್ನೈ ವಿರುದ್ಧ ಮುಂಬೈಗೆ 10 ವಿಕೆಟ್ ಗಳ ಭರ್ಜರಿ ಗೆಲುವು! ಐಪಿಎಲ್-2020ಯ 41 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು 12.2 ಓವರ್ ಗಳಿಗೇ ಮುಕ್ತಾಯಗೊಳಿಸಿದ ಮುಂಬೈ ತಂಡ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. ಐಪಿಎಲ್-2020ಯ 41 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು 12.2 ಓವರ್ ಗಳಿಗೇ ಮುಕ್ತಾಯಗೊಳಿಸಿದ ಮುಂಬೈ ತಂಡ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. ಆರಂಭಿಕ ಆಟಗಾರರಾದ ಕ್ವಿಂಟೋನ್ ಡೆ ಕೊಕ್ 46 (37 ಎಸೆತ) ಹಾಗೂ ಇಶಾನ್ ಕಿಶನ್ 68 (37 ಎಸೆತ) ಗಳ ಜೊತೆಯಾಟದಿಂದ ಬರೊಬ್ಬರಿ 10 ವಿಕೆಟ್ ಗಳ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಶ್ರೇಣಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಸಿಎಸ್ ಕೆ ತಂಡ ಈ ಸೋಲಿನಿಂದ 8 ನೇ ಸೋಲು ಕಂಡಿದ್ದು ಕೊನೆಯ ಸ್ಥಾನದಲ್ಲಿದೆ.ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದ್ದು, ಮೂರನೇ ಸ್ಥಾನದಲ್ಲಿ ಆರ್ ಸಿಬಿ ಇದೆ. ಚೆನ್ನೈ ತಂಡವನ್ನು 114 ರನ್ ಗಳಿಗೆ ಕಟ್ಟಿ ಹಾಕಿದ ಮುಂಬೈ ಇಂಡಿಯನ್ಸ್