2023: ಶ್ರೀಲಂಕಾ ವಿರುದ್ಧ '5-ಫರ್' ಸಾಧನೆ, ಮಹಮದ್ ಶಮಿ ಹೆಸರಿಗೆ ತ್ರಿವಳಿ ದಾಖಲೆ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಗಳ ಗೊಂಚಲಿನ ಮೂಲಕ ಭಾರತ ತಂಡದ ವೇಗಿ ಮಹಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ( 2023)ಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಗಳ ಗೊಂಚಲಿನ ಮೂಲಕ ಭಾರತ ತಂಡದ ವೇಗಿ ಮಹಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಮಹಮದ್ ಶಮಿ ( ) 5 ಓವರ್ ಎಸೆದು 1 ಮೇಡಿನ್ ಸಹಿತ 3.60 ಸರಾಸರಿಯಲ್ಲಿ ಕೇವಲ 18ರನ್ ನೀಡಿ 5 ವಿಕೆಟ್ ಕಬಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಮಹಮದ್ ಸಿರಾಜ್ 7 ಓವರ್ ಎಸೆದು 2 ಮೇಡಿನ್ ಮಾಡಿ 2.30 ಸರಾಸರಿಯಲ್ಲಿ ಕೇವಲ 16ರನ್ ನೀಡಿ 3 ವಿಕೆಟ್ ಪಡೆದರು. ಈ ಜೋಡಿ ಭರ್ಜರಿ ಬೌಲಿಂಗ್ ಗೆ ಪತರುಗುಟ್ಟಿದ ಶ್ರೀಲಂಕಾ ತಂಡ () ಕೇವಲ 55 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ ( ) 302 ರನ್ ಗಳ ಅಂತರದಲ್ಲಿ ಜಯ ಗಳಿಸಿ ಅಧಿಕೃತವಾಗಿ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಗೇರಿದ ಮೊದಲ ಎಂಬ ಕೀರ್ತಿಗೆ ಭಾಜನವಾಯಿತು.ಇದನ್ನೂ ಓದಿ: 2023: ಭಾರತದ ವಿರುದ್ಧ ಸೋಲು; ಶ್ರೀಲಂಕಾ ಹೆಸರಲ್ಲಿ ಮೂರು ಹೀನಾಯ ದಾಖಲೆ!ಅಂತೆಯೇ ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಬಾರಿ 4 ಪ್ಲಸ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2019 ರ ವಿಶ್ವಕಪ್‌ನಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ (4/40, 4/16 ಮತ್ತು 5/69) ಶಮಿ ಈ ಸಾಧನೆ ಮಾಡಿದ್ದಾರೆ. ಇದು ಅವರ ಎರಡನೇ ವಿಶ್ವಕಪ್ ಸರಣಿಯಾಗಿದ್ದು, ಪಾಕಿಸ್ತಾನ ()ದ ವಕಾರ್ ಯೂನಿಸ್ ಮಾತ್ರ ಈ ಸಾಧನೆಯನ್ನು ಹೆಚ್ಚು ಬಾರಿ ಅಂದರೆ ಮೂರು ಬಾರಿ (1990 ರಲ್ಲಿ ಎರಡು ಬಾರಿ ಮತ್ತು 1994 ರಲ್ಲಿ ಒಮ್ಮೆ) ಸಾಧಿಸಿದ್ದಾರೆ.ಶಮಿ ದಾಖಲೆಗಳ ಪಟ್ಟಿ ಭಾರತ ಪರ ವಿಶ್ವಕಪ್ಕಪ್ನಲ್ಲಿ ಅತ್ಯಧಿಕ ವಿಕಟ್ 33 ವರ್ಷದ ಶಮಿ ಅವರು ಲಂಕಾ ವಿರುದ್ಧ 5 ವಿಕೆಟ್ ಕೀಳುವ ಮೂಲಕ ಭಾರತ ಪರ ವಿಶ್ವಕಪ್ನಲ್ಲಿ ಅತ್ಯಧಿಕ ವಿಕಟ್ ಕಿತ್ತ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ಜಹೀರ್ ಖಾನ್ ( ) ಮತ್ತು ಜಾವಗಲ್ ಶ್ರೀನಾಥ್ ( ) ಅವರ ಹೆಸರಿನಲ್ಲಿತ್ತು. ಜಹೀರ್ ಮತ್ತು ಶ್ರೀನಾಥ್ ತಲಾ 44 ವಿಕೆಟ್ ಪಡೆದಿದ್ದರು. ಆದರೆ ಈಗ ಶಮಿ 45* ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. 33 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ( ) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೂ ಜಹೀರ್ ಮತ್ತು ಶ್ರೀನಾಥ್ ದಾಖಲೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಬುಮ್ರಾಗೆ ಇನ್ನು 12 ವಿಕೆಟ್ ಬೇಕಿದೆ. 45 - * 44 - 44 - 33 - 31 - Kumbleಇದನ್ನೂ ಓದಿ: 2023: ಭಾರತ ಶ್ರೀಲಂಕಾ, ಟೀಂ ಇಂಡಿಯಾಗೆ ಜಾಗತಿಕ 4ನೇ ದಾಖಲೆಯ ಜಯವಿಶ್ವಕಪ್ ನ ಒಂದು ಆವೃತ್ತಿಯಲ್ಲಿ ಹೆಚ್ಚು ಬಾರಿ 4+ ವಿಕೆಟ್ ಸಾಧನೆ ಇನ್ನು ವಿಶ್ವಕಪ್ ಟೂರ್ನಿ ( 2023)ಯ ಒಂದು ಆವೃತ್ತಿಯಲ್ಲಿ ಹೆಚ್ಚು ಬಾರಿ 4ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಇದೀಗ 5ನೇ ಸ್ಥಾನದಲ್ಲಿದ್ದಾರೆ. ಹಾಲಿ ಟೂರ್ನಿಯಲ್ಲಿ 3 ಬಾರಿ ಶಮಿ 4ಕ್ಕೂ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ( ) ಮೊದಲ ಸ್ಥಾನದಲ್ಲಿದ್ದು, 2011ರಲ್ಲಿ ಅಫ್ರಿದಿ 4 ಪಂದ್ಯಗಳಲ್ಲಿ 4ಕ್ಕೂ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ್ದರು. 4- 4 - 2011 4 - 2019 3 - 2019 3 - 2023* 3 - 2023*ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಜಹೀರ್ ಖಾನ್, ಶ್ರೀನಾಥ್ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ!ಏಕದಿನದಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ಮಹಮದ್ ಶಮಿ ( ) ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿತ್ತು. ಅವರು 3 ಬಾರಿ ಸಾಧನೆ ಮಾಡಿದ್ದು. ಇದೀಗ ಶಮಿ ನಾಲ್ಕು ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನ ಪಡೆದಿದ್ದಾರೆ. - 4 - 3 - 3 - Singhಇದನ್ನೂ ಓದಿ: ಲಂಕಾ ವಿರುದ್ಧ 302 ರನ್ ಗಳ ಜಯ: ವಿಶ್ವಕಪ್-2023 ಸೆಮಿಫೈನಲ್ಸ್ ಪ್ರವೇಶಿಸಿದ ಭಾರತವಿಶ್ವಕಪ್ ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು: ಸ್ಟಾರ್ಕ್ ದಾಖಲೆ ಸರಿಗಟ್ಟಿದ ಶಮಿ ಇನ್ನು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಬಾರಿ 5 ವಿಕೆಟ್ ಗಳ ಗೊಂಚಲು ಪಡೆದ ಆಟಗಾರರ ಪಟ್ಟಿಯಲ್ಲಿ ಭಾರತದ ಮಹಮದ್ ಶಮಿ ಆಸ್ಚ್ರೇಲಿಯಾದ ಮಿಚೆಲ್ ಸ್ಟಾರ್ಕ್ ( ) ದಾಖಲೆಯನ್ನು ಸರಿಗಟ್ಟಿದ್ದಾರೆ. ಶಮಿ ಮತ್ತು ಸ್ಟಾರ್ಕ್ ತಲಾ 3 ಬಾರಿ ವಿಶ್ವಕಪ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. 5- 3 - 3 - *