3ನೇ ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ಆಸಿಸ್ ಗೆ ಆರಂಭಿಕ ಆಘಾತ ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಜಿಂಗ್ ಆಯ್ಕೆ ಮಾಡಿಕೊಂಡಿದ್ದು, ಫಿಂಚ್ ಪಡೆಗೆ ಆರಂಭಿಕ ಆಘಾತ ನೀಡಿದೆ. ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಜಿಂಗ್ ಆಯ್ಕೆ ಮಾಡಿಕೊಂಡಿದ್ದು, ಫಿಂಚ್ ಪಡೆಗೆ ಆರಂಭಿಕ ಆಘಾತ ನೀಡಿದೆ.ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲೆರಡು ಪಂದ್ಯಗಳ ಗೆದ್ದು ಸರಣಿ ಗೆದ್ದಿರುವ ಭಾರತ ತಂಡ ಮೂರನೇ ಪಂದ್ಯ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಉದ್ದೇಶಹೊಂದಿದೆ. 2ನೇ ಪಂದ್ಯದ ವೇಳೆ ಇದ್ದ ತಂಡವನ್ನೇ ಈ ಪಂದ್ಯಕ್ಕೂ ಮುಂದುವರೆಸಲಾಗಿದೆ.ಇನ್ನು ಇತ್ತ ಈಗಾಗಲೇ 2 ಪಂದ್ಯಗಳನ್ನು ಸೋತು ಸರಣಿ ಕೈ ಚೆಲ್ಲಿರುವ ಆಸಿಸ್ ಪಡೆ ಈ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ. ಆಸಿಸ್ ಪಡೆಯಲ್ಲಿ ಒಂದು ಬದಲಾವಣೆ ಇದ್ದು, ನಾಯಕ ಫಿಂಚ್ ತಂಡಕ್ಕೆ ವಾಪಸ್ ಆಗಿದ್ದು, ಸ್ಯಾಯಿನಿಸ್ ಹೊರಗುಳಿದಿದ್ದಾರೆ.ಆರಂಭಿಕ ಆಘಾತ ಇನ್ನು ಬ್ಯಾಟಿಂಗ್ ಆರಂಭಿಸಿದ ಫಿಂಚ್ ಪಡೆಗೆ ವಾಷಿಂಗ್ಟನ್ ಸುಂದರ್ ಆರಂಭಿಕ ಆಘಾತ ನೀಡಿದರು. ಶೂನ್ಯಕ್ಕೆ ಆಸಿಸ್ ನಾಯಕ ಫಿಂಚ್ ರನ್ನು ಔಟ್ ಮಾಡಿದರು.