3ನೇ ಬಾರಿಗೆ ಡಕೌಟ್; ಶೂನ್ಯ ಸಾಧನೆಯಲ್ಲೂ ದಾಖಲೆ ಬರೆದ ಸೂರ್ಯ ಕುಮಾರ್ ಯಾದವ್! ಆಸ್ಚ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೂರ್ಯ ಕುಮಾರ್ ಯಾದವ್ ಶೂನ್ಯ ಸಾಧನೆ ಮುಂದುವರೆದಿದ್ದು, 3ನೇ ಬಾರಿಗೆ ಡಕೌಟ್ ಆಗುವ ಮೂಲಕ ಸೂರ್ಯ ಕುಮಾರ್ ಯಾದವ್ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಚೆನ್ನೈ: ಆಸ್ಚ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೂರ್ಯ ಕುಮಾರ್ ಯಾದವ್ ಶೂನ್ಯ ಸಾಧನೆ ಮುಂದುವರೆದಿದ್ದು, 3ನೇ ಬಾರಿಗೆ ಡಕೌಟ್ ಆಗುವ ಮೂಲಕ ಸೂರ್ಯ ಕುಮಾರ್ ಯಾದವ್ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಹೌದು.. ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್, ಅವರು ಸತತ ಮೂರನೇ ಬಾರಿಗೆ ಖಾತೆ ತೆರೆಯದೆ ಮೊದಲ ಎಸೆತದಲ್ಲಿಯೇ ಔಟಾದರು. 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಹಿಂದಿನ ಎರಡು ಪಂದ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕಾರಣ ಸೂರ್ಯ ಕುಮಾರ್ ಯಾದವ್ ಅವರನ್ನು ಆರನೇ ಕ್ರಮಾಂಕಕ್ಕೆ ಕಳುಹಿಸಿತು. 36ನೇ ಓವರ್‌ನ ಮೊದಲ ಎಸೆತದಲ್ಲಿ 54 ರನ್ ಗಳಿಸಿ ವಿರಾಟ್ ಕೊಹ್ಲಿ ಕ್ಯಾಚಿತ್ತು ಔಟಾದರು. ಇಂತಹ ಪರಿಸ್ಥಿತಿಯಲ್ಲಿ 32ರ ಹರೆಯದ ಬಲಗೈ ಬ್ಯಾಟ್ಸ್ ಮನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದ ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು.ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಜಯ; ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾಹ್ಯಾಟ್ರಿಕ್ ಮಿಸ್ ತಮಾಷೆಯೆಂದರೆ ಇದು ಆಷ್ಟನ್ ಅಗರ್ ಅವರ 10ನೇ ಅಂದರೆ ಕೊನೆಯ ಓವರ್ ಆಗಿತ್ತು. ಅವರು ಒಂಬತ್ತು ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಕೊನೆಯ ಓವರ್‌ನಲ್ಲಿ ಅವರು ಸತತ ಎರಡು ಎಸೆತಗಳಲ್ಲಿ ಎರಡು ದೊಡ್ಡ ವಿಕೆಟ್ ಗಳನ್ನು ಪಡೆದರು. ಅವರು ಹ್ಯಾಟ್ರಿಕ್‌ ಮೂಡ್ ನಲ್ಲಿದ್ದ ಅವರ ಕನಸುಗಳನ್ನು ಜಡೇಜಾ ಭಗ್ನಗೊಳಿಸಿದರು. 2 ಬಾರಿ ಶೂನ್ಯಕ್ಕೆ ಔಟಾಗಿದ್ದ ಸೂರ್ಯ ಮುಂಬೈ ಮತ್ತು ವಿಶಾಖಪಟ್ಟಣಂನಲ್ಲಿ ಮಿಚೆಲ್ ಸ್ಟಾರ್ಕ್ ಅವರಿಂದ ಮೂಲಕ ಔಟ್ ಆಗಿದ್ದ ಸೂರ್ಯ ಕುಮಾರ್ ಯಾದವ್, ಇಂದು ಚೆನ್ನೈ ನಲ್ಲಿ ಸ್ಪಿನ್ನರ್ ಆಷ್ಟನ್ ಅಗರ್ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಇದರೊಂದಿಗೆ ಸೂರ್ಯ ಕುಮಾರ್ ಯಾದವ್ ಹೆಸರಿನಲ್ಲಿ ಮುಜುಗರದ ದಾಖಲೆಯೊಂದು ದಾಖಲಾಗಿದೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಮೊದಲ ಎಸೆತದಲ್ಲೇ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಸೂರ್ಯ ಕುಮಾರ್ ಭಾಜನರಾಗಿದ್ದಾರೆ.ಶೂನ್ಯ ಸಾಧನೆಯಲ್ಲೂ ದಾಖಲೆ ಬರೆದ ಸೂರ್ಯ ಕುಮಾರ್ ಯಾದವ್ ಇಂದಿನ ಶೂನ್ಯ ಸಾಧನೆ ಮೂಲಕ ಸೂರ್ಯ ಕುಮಾರ್ ಯಾದವ್ ಸತತ ಮೂರು ಗೋಲ್ಡನ್ ಡಕ್‌ಗಳನ್ನು ನೋಂದಾಯಿಸಿದ ವಿಶ್ವದ 14 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು 1994 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಸತತ ಮೂರು ಬಾರಿ 0 ರನ್ ಗಳಿಸಿ ಔಟಾಗಿದ್ದರು, ಆದರೆ ಇದು ಅವರ ಮೊದಲ ಎಸೆತವಲ್ಲ ಆದರೆ ಅವರ ಎರಡನೇ ಎಸೆತವಾಗಿತ್ತು. ಯಾದವ್ ಸತತ ಮೂರು ಗೋಲ್ಡನ್ ಡಕ್‌ಗಳನ್ನು ನೋಂದಾಯಿಸಿದ ವಿಶ್ವದ 14 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಪಟ್ಟಿಯು ಅಲೆಕ್ ಸ್ಟೀವರ್ಟ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಶೇನ್ ವ್ಯಾಟ್ಸನ್ ಅವರಂತಹ ದಿಗ್ಗಜ ಆಟಗಾರರ ಹೆಸರುಗಳನ್ನು ಒಳಗೊಂಡಿದೆ.ಇದನ್ನೂ ಓದಿ: 3ನೇ ಏಕದಿನ: ಆಸ್ಚ್ರೇಲಿಯಾಗೆ 21 ರನ್ ಗಳ ಭರ್ಜರಿ ಜಯ, ಸರಣಿ ಸೋತ ಟೀಂ ಇಂಡಿಯಾ , . 0(1):- 0(1):- 0(1):- > SURYAಸತತ ಮೂರು ಬಾರಿ ಶೂನ್ಯ ಸುತ್ತಿದ ಆಟಗಾರರ ಪಟ್ಟಿ ಇಂತಿದೆ. 1.ಟೋನಿ ಬ್ಲೇನ್ (1986) ನ್ಯೂಜಿಲೆಂಡ್ 2.ಅಲೆಕ್ ಸ್ಟೀವರ್ಟ್ (1989–90) ಇಂಗ್ಲೆಂಡ್ 3.ಇಯಾನ್ ಬ್ಲ್ಯಾಕ್ವೆಲ್ (2003) ಇಂಗ್ಲೆಂಡ್ 4. ನಿಕೋಲಸ್ ಡಿ ಗ್ರೂಟ್ (2003) ಕೆನಡಾ 5.ವುಸಿ ಸಿಬಂದಾ (2003) ಜಿಂಬಾಬ್ವೆ 6. ತಿನಾಶೆ ಪನ್ಯಂಗರ (2003) ಜಿಂಬಾಬ್ವೆ 7.ಆಂಡ್ರ್ಯೂ ಸೈಮಂಡ್ಸ್ (2003) ಆಸ್ಟ್ರೇಲಿಯಾ 8. ಬ್ರೆಟ್ ಲೀ (2009) ಆಸ್ಟ್ರೇಲಿಯಾ 9.ಶೇನ್ ವ್ಯಾಟ್ಸನ್ (2009) ಆಸ್ಟ್ರೇಲಿಯಾ 10.ಜೇಮ್ಸ್ ನೋಚೆ (2010) ಕೀನ್ಯಾ 11.ದೇವೇಂದ್ರ ಬಿಶೂ (2011) ವೆಸ್ಟ್ ಇಂಡೀಸ್ 12. ಅಲೆಕ್ಸ್ ಕುಸಾಕ್ (2012–13) ಐರ್ಲೆಂಡ್ 13. ಬ್ಲೆಸಿಂಗ್ ಮುಜರ್ಬಾನಿ (2021) ಜಿಂಬಾಬ್ವೆ 14.ಸೂರ್ಯಕುಮಾರ್ ಯಾದವ್ (2023) ಭಾರತಇದನ್ನೂ ಓದಿ: ವಿಶ್ವಕಪ್ 2023: ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಪ್ರಾರಂಭ; ನವೆಂಬರ್ 19ರಂದು ಫೈನಲ್: ವರದಿ (1994) (1996) (2003-04) (2010-11) (2017-2019) (2023)