ಏಕದಿನ ವಿಶ್ವಕಪ್ ಫೈನಲ್ ಸೋಲು: ನೊಂದ ಪತಿ ವಿರಾಟ್ ಕೊಹ್ಲಿಯನ್ನು ತಬ್ಬಿ ಸಂತೈಸಿದ ಅನುಷ್ಕಾ ಶರ್ಮ ಶತಕೋಟಿ ಭಾರತೀಯರ ಕನಸು ಭಗ್ನಗೊಂಡು ಕ್ರಿಕೆಟ್ ಅಭಿಮಾನಿಗಳು ನಿನ್ನೆ ಭಾನುವಾರ ಭಾರತ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ ತಂಡದ ಆಟಗಾರ ವಿರಾಟ್ ಕೊಹ್ಲಿ ಕೂಡ ಕಣ್ಣೀರು ಹಾಕಿದ್ದಾರೆ. ಅಹಮದಾಬಾದ್: ಶತಕೋಟಿ ಭಾರತೀಯರ ಕನಸು ಭಗ್ನಗೊಂಡು ಕ್ರಿಕೆಟ್ ಅಭಿಮಾನಿಗಳು ನಿನ್ನೆ ಭಾನುವಾರ ಭಾರತ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ ತಂಡದ ಆಟಗಾರ ವಿರಾಟ್ ಕೊಹ್ಲಿ ಕೂಡ ಕಣ್ಣೀರು ಹಾಕಿದ್ದಾರೆ. ತಮ್ಮ ಅದ್ಬುತ ಬ್ಯಾಟಿಂಗ್ ಗೆ ಪಂದ್ಯಾವಳಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರೂ ಕೂಡ ವಿರಾಟ್ ಕೊಹ್ಲಿ ಹಾಗೂ ಅವರ ತಂಡಕ್ಕೆ ನಿನ್ನೆ ಅದೃಷ್ಟ ಕೈಕೊಟ್ಟಿತು. ವಿಶ್ವಕಪ್ ಟ್ರೋಫಿ ಕೈಜಾರಿತು. ಆಸ್ಟ್ರೇಲಿಯಾ ತಂಡದಿಂದ ಟ್ರಾವಿಸ್ ಹೆಡ್ ಶತಕ ಬಾರಿಸುವ ಮೂಲಕ ತಂಡವನ್ನು ವಿಶ್ವಕಪ್ ಗೆಲ್ಲಲು ಸುಲಭವಾಗಿ ದಾರಿ ಮಾಡಿಕೊಟ್ಟರು. ಈ ವೇಳೆಗಾಗಲೇ ಭಾರತ ತಂಡಕ್ಕೆ ತಾನು ಸೋಲುವುದು ಖಚಿತವಾಗಿತ್ತು. ಪ್ರೇಕ್ಷಕರ ಸ್ಟ್ಯಾಂಡ್ ನಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮ ಬಳಿ ಬಂದ ವಿರಾಟ್ ಕೊಹ್ಲಿ ಪರಸ್ಪರ ತಬ್ಬಿಕೊಂಡು ಸಂತೈಸಿಕೊಂಡರು.ಇದನ್ನೂ ಓದಿ: 2023: ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿಗೆ ಕಾರಣಗಳು!ಪತ್ನಿ ಅನುಷ್ಕಾರನ್ನು ತಬ್ಬಿಕೊಂಡ ವಿರಾಟ್ ಕೊಹ್ಲಿಗೆ ದುಃಖ ಉಮ್ಮಳಿಸಿ ಬಂತು. ಈ ವೇಳೆ ಅನುಷ್ಕಾ ಶರ್ಮ ವಿರಾಟ್ ರನ್ನು ಸಂತೈಸುತ್ತಿರುವುದು ಭಾವನಾತ್ಮಕ ಸನ್ನಿವೇಶವಾಗಿತ್ತು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಂದ ಔಟಾದರು. ಆ ಸಮಯದಲ್ಲಿ ಕೂಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪತ್ನಿ ಅನುಷ್ಕಾ ಸೇರಿದಂತೆ ಪ್ರೇಕ್ಷಕರು ದಿಗ್ಭ್ರಾಂತರಾದರು.ಇದನ್ನೂ ಓದಿ: ಟ್ರಾವಿಸ್ ಹೆಡ್ ಶತಕ: ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಹೀನಾಯ ಸೋಲು, 6ನೇ ಬಾರಿಗೆ ಆಸಿಸ್ ಚಾಂಪಿಯನ್241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಅವರ 120 ಎಸೆತಗಳಲ್ಲಿ 137 ರನ್ ಗಳಿಸಿ 6ನೇ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.